VIDEO | I.N.D.I.A ಅಣಕಿಸಿ ಬಿಜೆಪಿ ಜಾಹೀರಾತು: ಮಹಿಳಾ ಸಂಘಟನೆಗಳಿಂದ ವಿರೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿರೋಧ ಪಕ್ಷಗಳ ಒಕ್ಕೂಟ “ಇಂಡಿಯಾ”ದ ನಾಯಕರನ್ನು ಅಣಕಿಸಿ ಬಿಜೆಪಿ ಜಾಹೀರಾತೊಂದನ್ನು ತಯಾರಿಸಿದೆ.

ಈ ಜಾಹೀರಾತಿನಲ್ಲಿ ಮಹಿಳೆಯನ್ನು ಕೀಳಾಗಿ ತೋರಿಸಲಾಗಿದೆ ಎಂದು ಮಹಿಳಾ ಸಂಘಟನೆಗಳು ಸದ್ದು ಮಾಡಿವೆ.

ಏನಿದೆ ಜಾಹೀರಾತಿನಲ್ಲಿ?
ರಾಹುಲ್‌ ಗಾಂಧಿ, ಅರವಿಂದ ಕೇಜ್ರಿವಾಲ್‌,ಉದ್ಧವ್‌ ಠಾಕ್ರೆ ಇನ್ನಿತರ ನಾಯಕರನ್ನು ಹೋಲುವ ಪಾತ್ರಗಳು ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಬಂದಿರುತ್ತಾರೆ. ಆದರೆ ವರ ಯಾರು ಎಂಬ ವಿಷಯಕ್ಕೆ ತಮ್ಮ ತಮ್ಮಲ್ಲೇ ಜಗಳ ಮಾಡುತ್ತಾರೆ. ನಾನು ವರ ನಾನು ವರ ಎಂದು ಕಿತ್ತಾಡುತ್ತಾರೆ. ಇಂಥವರಿಗೆ ವರ ಯಾರು ಎನ್ನೋದನ್ನು ಆರಿಸೋಕೆ ಆಗುತ್ತಿಲ್ಲ ಇನ್ನು ಪ್ರಧಾನಿಯನ್ನು ಆರಿಸುತ್ತಾರಾ ಎಂದು ಪ್ರಶ್ನಿಸಲಾಗಿದೆ.

ಈ ಜಾಹೀರಾತಿನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಧವಳೆ ಆಗ್ರಹಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!