ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ ಮಾತುಗಳು ಇಂದು ಸತ್ಯವಾಗಿದೆ. ಒಂದು ವ್ಯವಸ್ಥಿತ ರೂಪದಲ್ಲಿ ಚುನಾವಣ ಬಾಂಡ್ ಬಿಜೆಪಿಗೆ ನೀಡಲಾಗಿದೆ. ಇಡಿ ದಾಳಿ ನಡೆಸಿದ ಕೂಡಲೇ ಅಥವಾ ಬಂಧನದ ಬಳಿಕ ಬಾಂಡ್ ಖರೀದಿಸಿದೆ. ಹಲವಾರು ಪ್ರಕರಣಗಳಲ್ಲಿ ಇದೇ ರೀತಿಯಾಗಿದೆ.
500 ಕೋಟಿಗೂ ಅಧಿಕ ಬಾಂಡ್‌ಗಳನ್ನು ಒಂದೊಂದು ಕಂಪನಿ ಖರೀದಿಸಿದೆ. ಈಗ ಬೆಂಗಳೂರಿನಲ್ಲಿ ಇದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಸುಮ್ಮನೆ ಆಗಿಲ್ಲ, ಪ್ರಾಥಮಿಕ ತನಿಖೆ ಬಳಿಕ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಸೂಚಿಸಿದೆ. ಹಣಕಾಸು ಸಚಿವರು ಮೊದಲ ಆರೋಪಿ, 8,000 ಕೋಟಿ ಬಾಂಡ್ ರೂಪದಲ್ಲಿ ಪಡೆಯಲಾಗಿದೆ. ಕಾರ್ಪೊರೇಟ್ ಕಂಪನಿಗಳ ಮೂಲಕ ಹಣ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.