ದಲಿತರ ನಿವಾಸಕ್ಕೆ ತೆರಳಿ ಉಪಹಾರ ಸೇವಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಭಾನುವಾರ ದಲಿತರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ಪೆದ್ದವೆಂಕಟರಾಯಪ್ಪ ಹಾಗೂ ಲಕ್ಷ್ಮೀದೇವಮ್ಮ ದಂಪತಿ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಸುಧಾಕರ್ ಅವರನ್ನು ಮನೆಯವರಾದ ಪೆದ್ದವೆಂಕಟರಾಯಪ್ಪ ಹಾಗೂ ಲಕ್ಷ್ಮೀದೇವಮ್ಮ ಅವರು ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತಿಸಿದರು.

ನಂತರ ಸುಧಾಕರ್ ಮಾತನಾಡಿ, ಇಂದು ಅಂಬೇಡ್ಕರ್ ಜಯಂತಿ. ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ನನಗೆ ಆದರ್ಶ. ಸಮಾನತೆಯ ಸಂದೇಶ ಸಾರಿದ ಅಂಬೇಡ್ಕರ್ ಅವರ ಜನ್ಮದಿನದಂದು ದಲಿತರ ಮನೆಗೆ ತೆರಳಿ ಉಪಹಾರ ಸೇವಿಸಿ ಅವರ ಕಷ್ಟ-ಸುಖಗಳನ್ನು ಆಲಿಸಿದ್ದೇನೆ ಎಂದರು.

ಕಾಂಗ್ರೆಸ್ ದಲಿತರ ಮತಬ್ಯಾಂಕ್ ಎಂದು ಪರಿಗಣಿಸಲಾಗಿದ್ದು, ಅವರ ಶ್ರೇಯಸ್ಸಿಗೆ ಯಾವುದೇ ಯೋಜನೆಗಳನ್ನ ರೂಪಿಸಿಲ್ಲ. ಅಂಬೇಡ್ಕರ್ ಅವರ ಸಮಾನತೆಯ ಸಂದೇಶವನ್ನು ಬಿಜೆಪಿ ಸಾರುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!