ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬಿಜೆಪಿ ಕೌನ್ಸಿಲರ್ ದೇವೇಂದ್ರ ರಾಠೋಡ್ ಅವರು ತಮ್ಮ ಜಿಲ್ಲೆಯಲ್ಲಿ ದುರ್ವಾಸನೆ ಬೀರುವ ಒಳಚರಂಡಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ನಗರದ ಬಿರ್ಲಾನಗರದಲ್ಲಿರುವ ಚರಂಡಿಯನ್ನು ವಾರ್ಡ್ 15ರ ಪಾಲಿಕೆ ಸದಸ್ಯ ದೇವೇಂದ್ರ ರಾಠೋಡ್ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸ್ವತಃ ದೇವೇಂದ್ರ ರಾಠೋಡ್ ಅವರೇ ಗುಂಡಿಯೊಳಗೆ ಹೋಗಿ ಸ್ವಚ್ಛಗೊಳಿಸಲು ಯತ್ನಿಸಿದ್ದಾರೆ. ಈ ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿತ್ತು. ನಂತರ ನಗರ ಪಾಲಿಕೆ ತಂಡವು ಸ್ಥಳಕ್ಕೆ ಆಗಮಿಸಿ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ.
ಜನರು ನನಗೆ ಮತ ಹಾಕಿದ್ದಾರೆ ಮತ್ತು ಅವರು ನನಗೆ ನೀಡಿರುವ ಮತಗಳಿಗೆ ನಾನು ಬೆಲೆ ಕೊಡಬೇಕು. ಹೀಗಾಗಿ ನಾನೇ ಚರಂಡಿ ಸ್ವಚ್ಛಗೊಳಿಸಿದೆ. ನಾನು ಸ್ವಚ್ಛಗೊಳಿಸಿದ ನಂತರ ನಗರಸಭೆ ನೌಕರರು ಬಂದು ಸ್ವಚ್ಛತೆ ಆರಂಭಿಸಿದರು.
ಇನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲಿಗೂ ಹೋಗಬಾರದು ಅಥವಾ ಅಧಿಕಾರಿಗಳೊಂದಿಗೆ ಮಾತನಾಡಬಾರದು ಎಂದು ಆಯುಕ್ತರು ನನಗೆ ಹೇಳಿದ್ದಾರೆ. ನನ್ನ ಬಳಿ ಇದ್ದ ಏಕೈಕ ಪರಿಹಾರವೆಂದರೆ ನಾನೇ ಚರಂಡಿಗೆ ಇಳಿದು ಸ್ವಚ್ಛಗೊಳಿಸುವುದಾಗಿತ್ತು ಎಂದು ಹೇಳಿದರು.