ಭಾರತದತ್ತ ಟೆಸ್ಲಾ ಚಿತ್ತ: ಅಮೆರಿಕಾದಿಂದ ಇದೇ ತಿಂಗಳು ಆಗಮಿಸಲಿದೆ ಸ್ಥಳ ಪರಿಶೀಲನೆಗೆ ತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತಕ್ಕೆ ಕಾಲಿಡಲು ತನ್ನ ಸಿದ್ಧತೆ ಆರಂಭಿಸಿದೆ.

ಇದರ ಭಾಗವಾಗಿ ತನ್ನ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಅನುಕೂಲವಾಗು ಸ್ಥಳಗಳನ್ನು ಗುರುತಿಸಲು ಕಂಪನಿಯ ತಂಡವೊಂದು ಈ ತಿಂಗಳು ಭಾರತಕ್ಕೆ ಆಗಮಿಸಲಿದೆ.

ಈ ಬಗ್ಗೆ ’ಫೈನಾನ್ಶಿಯಲ್ ಟೈಮ್ಸ್’ ವರದಿ ಪ್ರಕಟಿಸಿದ್ದು, ಕಂಪನಿಯ ಈ ತಂಡವು ಅಮೆರಿಕದಿಂದ ಆಗಮಿಸಲಿದೆ. ದೇಶದಲ್ಲಿ ವಾಹನ ಉತ್ಪಾದನಾ ಕೇಂದ್ರಗಳು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ಹೇಳಿದೆ.

ಅಂದಾಜಿನ ಪ್ರಕಾರ ಟೆಸ್ಲಾ, ಭಾರತದಲ್ಲಿ ಇವಿ ಕಾರುಗಳ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ 25,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!