ಹೊಸದಿಗಂತ ವಿಜಯಪುರ:
ರಾಜ್ಯದ ಉಪ ಚುನಾವಣೆಯ 3 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು ಕಂಡಿರುವುದನ್ನು ಸಹಿಸದ, ಬಿಜೆಪಿ ನಿಷ್ಠಾವಂತ ಅಭಿಮಾನಿ ಟಿವಿ ಒಡೆದು ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೊಲ್ಹಾರ ಪಟ್ಟಣದ ವೀರಭದ್ರಪ್ಪ ಭಾಗಿ, ಬಿಜೆಪಿ 3 ಮತ ಕ್ಷೇತ್ರದಲ್ಲಿ ಸೋಲು ಕಂಡಿದಕ್ಕೆ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಬಿಜೆಪಿಯ ಸೋಲನ್ನು ಸಹಿಸದ ಪಕ್ಷದ ಅಭಿಮಾನಿ, ಮನೆಯಲ್ಲಿನ ಟಿವಿ ಒಡೆದು ಹಾಕಿದ್ದು, ರಾಜ್ಯ ಬಿಜೆಪಿ ನಾಯಕರ ನಡುವಿನ ಭಿನ್ನಮತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾನೆ.
ಬಿಜೆಪಿ ನಾಯಕರಲ್ಲಿನ ಬಿರುಕು, ಒಗ್ಗಟಿನ ಕೊರತೆಯಿಂದ ಹೀನಾಯ ಸೋಲಿಗೆ ಕಾರಣವಾಗಿದೆ ಎಂದು ವೀರಭದ್ರಪ್ಪ ಭಾಗಿ ದೂರಿದ್ದು, ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾನೆ.