ಆಪರೇಷನ್‌ಗೆ ಒಳಗಾಗೋದಕ್ಕೆ ನನಗೆ ಕ್ಯಾನ್ಸರ್‌ ಬಂದಿಲ್ಲ, ಗಡ್ಡೆಯೂ ಆಗಿಲ್ಲ- ರಾಜುಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಜೆಪಿ ನಾಯಕರು ಆಪರೇಷನ್‌ ಹಸ್ತಕ್ಕೆ ಒಳಗಾಗಿದ್ದಾರಾ? ಎಂದು ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಶಾಸಕ ರಾಜುಗೌಡ, ʻಆಪರೇಷನ್‌ಗೆ ಒಳಗಾಗೋದಕ್ಕೆ ನನಗೆ ಕ್ಯಾನ್ಸರ್‌ ಬಂದಿಲ್ಲ, ನನಗ್ಯಾವ ಗಡ್ಡೆಯೂ ಆಗಿಲ್ಲʼ ಎಂದು ಖಾರವಾಗಿ ಹೇಳಿದರು. ನಿನ್ನೆ ನಟ ಕಿಚ್ಚ ಸುದೀಪ್‌ ಬರ್ತಡೇ ಪಾರ್ಟಿಯಲ್ಲಿ ಡಿ.ಕೆ.ಶಿವಕುಮಾರ್‌ ಜೊತೆ ಮಾತನಾಡಿದ್ದಕ್ಕೆ ಹೀಗೊಂದು ಸುದ್ದಿ ಹಬ್ಬಿತ್ತು. ಇದಕ್ಕೆ ಖಡಕ್ಕಾಗಿ ಉತ್ತರಿಸಿದ ರಾಜುಗೌಡ ಪಾರ್ಟಿ ಬದಲಾಯಿಸುವ ಮಾತೇ ಇಲ್ಲ ಎಂದರು.

dk shivakumar Taks With BJP Leaders bc patil and-raju gowda In sudeep birthday party Photos goes viral

ʻನಿನ್ನೆ ಪಾರ್ಟಿಗೆ ಬಿ.ಸಿ.ಪಾಟೀಲ್‌ ಹಾಗೆಯೇ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಕೂಡ ಬಂದಿದ್ದರು. ರಾಜಕೀಯ ಮರೆತು ಎಲ್ಲರೂ ಒಟ್ಟಿಗೆ ಪಾರ್ಟಿಯಲ್ಲಿದ್ದೆವು. ಈ ವೇಳೆ ಹೀಗೆ ಮಾತನಾಡುವಾಗ ಚುನಾವಣಾ ಫಲಿತಾಂಶದ ಸುದಿ ಬಂತು. ಅಲ್ಲಯ್ಯಾ..ರಾಜುಗೌಡ ನಿನ್‌ ಕ್ಷೇತ್ರದಲ್ಲಿ ಚೆನ್ನಾಗಿಯೇ ಕೆಲಸ ಮಾಡಿದ್ದಲ್ಲ, ಆದರೂ ಹೇಗೆ ಸೋತೆ ಎಂದು ಡಿಕೆಶಿ ಕೇಳಿದ್ರು. ಎಲ್ಲಾ ನಿಮ್ಮ ಹಾಗೂ ಸಿಎಂ ಪ್ರಭಾವ ಎಂದು ನಗುತ್ತಲೇ ನಾನು ಉತ್ತರ ಕೊಟ್ಟೆʼ. ನಮ್ಮ ಮಧ್ಯೆ ನಡೆದ ಮಾತುಕತೆ ಇಷ್ಟೇ..ಆದರೆ ಈ ಬಗ್ಗೆ ಬೇರೆ ಬೇರೆ ಊಹಾಪೋಹಗಳೇ ಎದ್ದಿವೆ.

dk shivakumar Taks With BJP Leaders bc patil and-raju gowda In sudeep birthday party Photos goes viral

ಪಾರ್ಟಿ ಮುಗಿದ ಮೇಲೆ ನಟ ಸುದೀಪ್‌ ಹುಟ್ಟುಹಬಬ್ಬದ ಆಚರಣೆಗಿಂತ ನಮ್ಮದೇ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಬಿಜೆಪಿಯಲ್ಲಿ ನನಗೆ ಉತ್ತಮ ಸ್ಥಾನಮಾನ ಇದೆ. ಹೀಗಿರುವಾಗ ನಾನೇಕೆ ಪಕ್ಷ ಬಿಡಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!