ಹಿಂದುಳಿದ ವಗ೯ಕ್ಕೆ ಸಂವಿಧಾನ ಬದ್ಧ ಸ್ಥಾನಮಾನ ನೀಡಿದ್ದು ಬಿಜೆಪಿ: ಸಿ.ಟಿ.ರವಿ

ಹೊಸದಿಗಂತ ವರದಿ,ಕಲಬುರಗಿ:

ಹಿಂದುಳಿದ ವಗ೯ಗಳಿಗೆ ಸಂವಿಧಾನ ಬದ್ಧ ಸ್ಥಾನಮಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಲ್ಲ.ಬದಲಾಗಿ ನರೇಂದ್ರ ಮೋದಿಯವರ ಬಿಜೆಪಿ ಸಕಾ೯ರ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಹಿಂದುಳಿದ ವಗ೯ಗಳ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಪ್ರಶ್ನೆ ಬಂದಾಗ ಜೀವಕ್ಕೆ ಜೀವ ಕೊಟ್ಟು ನಿಲ್ಲುವ ಜನ ಹಿಂದುಳಿದ ವಗ೯ದವ ಜನವೆಂದರು.

ಕನಾ೯ಟಕ ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸಕಾ೯ರ ರಚನೆಯಾಗಲಿದ್ದು,ದೇಶದ ಕೆಲವು ಕಡೆಗಳಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣ ಧೂಳಿಟವಾಗಲಿದೆ ಎಂದರು.

ಸಮಾವೇಶದಲ್ಲಿ ಬಂದಿರುವ ಜನ ಕುಂಕುಮ ಕಂಡರೆ ಭಯ ಪಡುವರಲ್ಲ.ಕೇಸರಿ ಪೇಟವನ್ನು ಕಂಡರೆ ಉರಿದು ಬಿಳುವ ಜನರಲ್ಲ.ಇಲ್ಲಿ ಬಂದಿರುವ ಜನ ಭಾರತ ಮಾತಾ ಕೀ ಜೈ ಘೋಷಣೆ ಕೂಗು ಹಾಕುವ ಜನರಿದ್ದಾರೆ ಎಂದರು.

ಜಾತಿಗಳ ಮಧ್ಯೆ ಒಡಕು ತರುವ ಸಮಾವೇಶ ಇದ್ದಲ.ಬದಲಾಗಿ ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂಬುದನ್ನು ಸಾರುವುದಕ್ಕೆ ಬಂದಂತಹ ಜನ ಎಂದು ಹೇಳಿದರು.

ಹಿಂದುಳಿದ ವಗ೯ದವರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ವಗ೯ವನ್ನು ಬಳಸಿಕೊಂಡು ಅನ್ಯಾಯ ಮಾಡಿದೆ.ನಾವು ಹಿಂದುಳಿದ ವಗ೯ದವರಿಗೆ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಅವರೊಂದಿಗೆ ಜೊತೆಗೆ ಇದ್ದೇವೆ.ಎಂದರು.

ದಲಿತರನ್ನು,ಹಿಂದುಳಿದವರನ್ನು ನಿಲ೯ಕ್ಷ ಮಾಡಿ,ಅಧಿಕಾರಕ್ಕೆ ಏರಿದ್ದು, ಇತಿಹಾಸದಲ್ಲಿ ಇಲ್ಲ ಎoಬುದನ್ನು ಇಂದು ಕಲಬುರಗಿ, ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!