ಹೊಸ ದಿಗಂತ ವರದಿ, ಹುಬ್ಬಳ್ಳಿ:
ಅಧಿಕಾರಕೋಸ್ಕರ ಸರ್ಕಾರ ಬಿಳಿಸುವ ಪ್ರವೃತ್ತಿ ಹೊಂದಿದವರು ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು, ಕಳೆದ 10 ವರ್ಷದಿಂದ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಹಾಗೂ ರಾಜ್ಯ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ವ್ಯಾಪಂ ಹಗರಣ, ಪ್ರಧಾನ ಮಂತ್ರಿ ಆರೋಗ್ಯ ಸ್ಕಿಮ್ ಹಾಗೂ ರಾಮ ಮಂದಿರ ಅವ್ಯವಹಾರದ ಬಗ್ಗೆ ಪ್ರಧಾನಿ ಮೋದಿ ಮಧ್ಯಪ್ರದೇಶದಲ್ಲಿ ಮಾತನಾಡುತ್ತಿಲ್ಲ. ಆದರೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ವ್ಯಾಪಂ ಹಗರಣದಲ್ಲಿ 48 ಅಪರಾಧಿಗಳ ಹತ್ಯೆ ಮಾಡಲಾಗಿದೆ. ಮಧ್ಯ ಪ್ರದೇಶ 1 ನಂಬರ್ ನಿಂದ 7 ಲಕ್ಷ ಜನರಿಗೆ ಆರೋಗ್ಯ ಯೋಜನೆಯಡಿ ನೀಡಿದ್ದಾರೆ. 25 ಕೋಟಿ ರಸ್ತೆ ಅಭಿವೃದ್ಧಿ ಮಾಡಿ ವರದಿಯಲ್ಲಿ 200 ಕೋಟಿ ರೂ. ಎಂದು ನೀಡಿದ್ದಾರೆ. ಇವು ಜಗತ್ತಿನಲ್ಲಿ ಅತೀ ದೊಡ್ಡ ಹಗರಣಗಳಾಗಿವೆ ಎಂದು ಆರೋಪಿಸಿದರು.
ಕೇಶ್ವಾಪುರ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈಗಾಗಲೇ ಠಾಣಾಧಿಕಾರಿ ಸೇರಿದಂತೆ ಎಂಟು ಜನರ ವಿರುದ್ಧ ದಾಖಲಾಗುದ್ದು, ತನಿಖೆ ನಡೆದಿದೆ. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ತನಿಖೆಯಿಂದ ಸತ್ಯಾಸತ್ಯತೆ ತಿಳಿಯಲಿದೆ ಎಂದರು.