ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಿ ಭಾಸ್ಕರ್ ರಾವ್(Bhaskar Rao) ಆಯ್ಕೆಮಾಡಲಾಗಿದೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಘೋಷಿಸಿದ್ದಕ್ಕೆ ಪಕ್ಷದ ವರಿಷ್ಠರಿಗೆ ನಾನು ಚಿರಋಣಿ. ಬಿಜೆಪಿಯಲ್ಲಿ ಸಿದ್ಧಾಂತ, ರಾಷ್ಟ್ರೀಯತೆ ಇರುವುದರಿಂದ ಸೇರಿದ್ದೇನೆ. ಕಳೆದ 30 ವರ್ಷದಿಂದ ಚಾಮರಾಜಪೇಟೆಯಲ್ಲಿ ಬಿಜೆಪಿ ಗೆದ್ದಿಲ್ಲ. ಚಾಮರಾಜಪೇಟೆಗೆ ನಾನು ಹೊಸಬನಲ್ಲ, ನಾನು ಇಲ್ಲಿನ ನಿವಾಸಿ ಎಂದು ತಿಳಿಸಿದರು.
ಬಿಜೆಪಿ 189 ಟಿಕೆಟ್ ಘೋಷಣೆ ಮಾಡಿದೆ. ನನಗೂ ಸುವರ್ಣ ಅವಕಾಶ ಸಿಕ್ಕಿದೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್, ಬಿಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ನಾನು ಚಿರಋಣಿ. ಬಿಜೆಪಿ ಪಕ್ಷದಲ್ಲಿ ಸಿದ್ದಾಂತ, ರಾಷ್ಟ್ರೀಯತೆ ಇರೋದ್ರಿಂದ ಪಕ್ಷಕ್ಕೆ ಸೇರಿದ್ದೇನೆ. 30 ವರ್ಷದಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ ಮೇ 10 ನೇ ತಾರೀಖು ಉತ್ತರ ಸಿಗುತ್ತೆ. ನಾನು ಸಹ ಚಾಮರಾಜಪೇಟೆ ನಿವಾಸಿ. ಚಾಮರಾಜಪೇಟೆಗೆ ಹೊಸಬನಲ್ಲ, ನಾನು ಚಾಮರಾಜಪೇಟೆಯಲ್ಲೇ ನನ್ನ ಕಚೇರಿ ಮಾಡ್ತಿದ್ದೇನೆ ಎಂದರು.