ಜಾತ್ರೆಯಲ್ಲಿ ಕೆಂಡ ಸೇವೆ ಮಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra) ಅವರು ಕೆಂಡದ ಮೇಲೆ ನಡೆದು ದೇವರ ಸೇವೆ ಮಾಡಿದ್ದಾರೆ.

ಒಡಿಶಾದ ಪುರಿ ಜಿಲ್ಲೆಯ ಝಮು ಜಾತ್ರೆಯಲ್ಲಿ (Jhamu Jatra) ಸುಮಾರು 10 ಮೀಟರ್ ಉದ್ದದ ಉರಿಯುತ್ತಿರುವ ಕೆಂಡದ ಹಾಸಿನ ಮೇಲೆ ಅವರು ನಡೆದಾಡಿದ್ದಾರೆ.

ಈದೃಶ್ಯವನ್ನು ಟ್ವಟ್ಟರ್‍ನಲ್ಲಿ ಹಂಚಿಕೊಂಡಿರುವ ಅವರು, ರೆಬಾಟಿ ರಾಮನ್ (Rebati Raman) ಗ್ರಾಮದ ಜಾತ್ರೆಯಲ್ಲಿ ಭಾಗವಹಿಸಿದ್ದೇನೆ. ನನ್ನ ತಾಯಿಗೆ ಬೆಂಕಿಯ ಮೇಲೆ ನಡೆಯುವ ಮೂಲಕ ಪೂಜೆ ಸಲ್ಲಿಸಿದ್ದೇನೆ. ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಗ್ರಾಮಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!