ಅವರಾಗೇ ನಮ್ಮ ಬಳಿ ಬಂದರೆ,ಸುಮ್ಮನೆ ಕೂಡಲು ಬಿಜೆಪಿ ಸನ್ಯಾಸಿಗಳ ಪಕ್ಷವಲ್ಲ : ಮಹಾರಾಷ್ಟ್ರ ಬೆಳವಣಿಗೆ ಕುರಿತು ಮುರುಗೇಶ್‌ ನಿರಾಣಿ

ಹೊಸದಿಗಂತ ವರದಿ ಕಲಬುರಗಿ :
ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್, ಎನ್.ಸಿ.ಪಿ.ಹಾಗೂ ಶೀವಸೇನಾ ಮೂರು ಪಕ್ಷಗಳು ಸೇರಿ ಸಕಾ೯ರ ರಚನೆ ಮಾಡಿದ್ದೆ ಅನೈತಿಕವಾದದ್ದು. ಅವರಾಗೇ ನಮ್ಮ ಬಳಿ ಬಂದರೆ,ನಾವು ಸುಮ್ಮನೆ ಕೂಡಲು ನಮ್ಮ ಪಕ್ಷ ಸನ್ಯಾಸಿಗಳ ಪಕ್ಷವಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವಸೇನೆಯೊಂದಿಗೆ ನಮ್ಮ ಗೆಳೆತನ ತುಂಬಾ ಹಳೆಯದು, 25 ವರ್ಷಗಳಿಂದ ನಾವು ಒಟ್ಟಿಗೇ ಇದ್ದೆವು. ಇದೀಗ ಅವರೊಂದಿಗೆ ಸೇರಿಕೊಂಡು ಅನೈತಿಕ ಸರ್ಕಾರ ರಚನೆ ಮಾಡಿದ್ದಾರೆ. ಮೂರು ಪಕ್ಷ ಸೇರಿ,ಒಬ್ಬರ ಬಳಿ ಬ್ರೆಕ್,ಒಬ್ಬರ ಬಳಿ ಸ್ಟೇರಿಂಗ್ ಮತ್ತೊಬ್ಬರ ಕಡೆ ಎಕ್ಸಲೇಟರ ಕೊಟ್ಟಿರುವುದರಿಂದ ಸರ್ಕಾರ ಸುಸೂತ್ರವಾಗಿ ನಡೆಯುತ್ತಿಲ್ಲ.ಈಗಾಗಲೇ ಶಿವಸೇನೆಯ ಅತೀ ಹೆಚ್ಚು ಶಾಸಕರು ಸರಕಾರದಿಂದ ಹೊರಗೆ ಬಂದಿದ್ದು,ಇವರೆಲ್ಲರೂ ಬಿಜೆಪಿ ಕಡೆಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರದಲ್ಲಿ ನಿಶ್ಚಿತವಾಗಿ ಬಿಜೆಪಿ ಸರ್ಕಾರ ನಿರ್ಮಾಣವಾಗುವುದು ನಿಶ್ಚಿತ ಎಂದಿದ್ದಾರೆ.

ಈಗಿರುವ ಮಹಾ ವಿಕಾಸ ಅಘಾಡಿ ಸರ್ಕಾರದಿಂದ ರಾಜ್ಯದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಎಲ್ಲರೂ ಬೇಸತ್ತು ಬಿಜೆಪಿ ಸರ್ಕಾರವೇ ಬರಲಿ ಎನ್ನುತ್ತಿದ್ದಾರೆ ಎಂದರು.

ಮಹಾ ವಿಕಾಸ ಅಘಾಡಿಯಲ್ಲಿ ಬಿರುಕು ಬಿಟ್ಟಿರುವುದರಲ್ಲಿ ಬಿಜೆಪಿ ಕೈವಾಡವಾಗಲಿ ಇಲ್ಲ.ಅವರವರ ಕಚ್ಚಾಟದಲ್ಲಿ ಅಲ್ಲಿರುವ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ.ಅವರಾಗೇ ನಮ್ಮ ಕಡೆ ಬಂದರೆ ಸರ್ಕಾರ ರಚನೆ ಮಾಡಿ ಒಳ್ಳೆಯ ಆಡಳಿತ ಕೊಡಲು ಬಿಜೆಪಿ ಚಿಂತನೆ ಮಾಡುತ್ತಿದೆ. ಅವರಾಗೇ ನಮ್ಮ ಪಕ್ಷದತ್ತ ಒಲವು ತೋರಿದರೆ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿಯೂ ಒಳ್ಳೆಯ ಆಡಳಿತ ನೀಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!