ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಣು ಬಾಂಬ್ ಗೆ ರಾಹುಲ್ ಗಾಂಧಿ ಹೆದರಬಹುದೇನೋ ಆದರೆ ಬಿಜೆಪಿ ಹೆದರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಾಕಿಸ್ತಾನದ ಪರಮಾಣು ಬಾಂಬ್ ಇದೆ ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆಯನ್ನು ಉಲ್ಲೇಖಿಸಿದ ಅಮಿತ್ ಶಾ , ರಾಹುಲ್ ಬಾಬಾ, ನೀವು ಅಣುಬಾಂಬ್‌ಗೆ ಹೆದರಬೇಕಾದರೆ ಹೆದರಿ, ನಾವು ಹೆದರುವುದಿಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದೆ ಮತ್ತು ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಮಾತನಾಡಿರುವ ಅಯ್ಯರ್, ಪಾಕಿಸ್ತಾನವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಗೌರವವನ್ನು ನೀಡಬೇಕು ಮತ್ತು ಅದರೊಂದಿಗೆ ಅಣುಬಾಂಬ್ ಹೊಂದಿರುವುದರಿಂದ ಅದರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದರು.