ಇಂಡಿಯಾ ಒಕ್ಕೂಟಕ್ಕೆ ಭ್ರಷ್ಟಾಚಾರ, ಟಿಎಂಸಿಗೆ ಹಗರಣ ಫುಲ್‌ ಟೈಮ್‌ ಬಿಸಿನೆಸ್‌ ಆಗಿದೆ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಒಕ್ಕೂಟ ಭ್ರಷ್ಟಾಚಾರಗಳಲ್ಲಿ ತೊಡಗಿದ್ದರೆ, ತೃಣಮೂಲ ಕಾಂಗ್ರೆಸ್‌ ಪಕ್ಷ ಹಗರಣ ಮಾಡುವುದನ್ನೇ ಫುಲ್‌ ಟೈಮ್‌ ಬಿಸಿನೆಸ್‌ ಆಗಿ ಮಾಡಿಕೊಂಡಿದೆ ಎಂದು ಪ್ರಧಾನಿ ಮೋದಿ (Narendra Modi) ಕಿಡಿ ಕಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ನಾಲ್ಕು ಚುನಾವಣಾ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟಿಎಂಸಿ ಹಗರಣ ಮಾಡುವುದನ್ನೇ ಪೂರ್ಣ ಸಮಯದ ವ್ಯವಹಾರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಯಾವುದೇ ಪಕ್ಷವಾಗಿರಲಿ. ಅವರೆಲ್ಲರಿಗೂ ಭ್ರಷ್ಟಾಚಾರ ಮಾಡುವುದು ಸಾಮಾನ್ಯ ಗುಣವಾಗಿಬಿಟ್ಟಿದೆ. ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಮಿತ್ರಪಕ್ಷಗಳು ರಹಸ್ಯವಾಗಿ ಹಗರಣಗಳನ್ನು ಮಾಡುತ್ತಿದ್ದರೆ, ಟಿಎಂಸಿ ಮುಕ್ತ ಉದ್ಯಮವನ್ನಾಗಿಯೇ ಅದನ್ನು ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

25,000 ಸಾವಿರ ಶಿಕ್ಷಕರ ನೇಮಕಾತಿ ಹಗರಣ, ಪೊಂಜಿ ಹಗರಣ, ಕಲ್ಲಿದ್ದಲು ಹಗರಣ, ಚಿಟ್ ಫಂಡ್ ಹಗರಣ, ಪಡಿತರ ಹಗರಣ ಮಾಡಿರುವ ಟಿಎಂಸಿ ರೈತರನ್ನೂ ಬಿಡದೇ ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮೋದಿ ಸರ್ಕಾರವಿಂದು ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲನ್ನು ತಲುಪುತ್ತಿದೆ. ಈ ಹಿಂದಿನ ಪಕ್ಷಗಳು ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದರು. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ನೀವು ಅಲೆದಾಡಬೇಕಿತ್ತು. ಸಹಾಯ ಕೇಳಿಕೊಂಡು ಮನೆ ಬಳಿ ಹೋದರೆ ನಿಮ್ಮ ಗುರುತೇ ಅವರಿಗೆ ಸಿಗುತ್ತಿರಲಿಲ್ಲ. ಆದ್ರೆ ಇಂತಹ ಆಲೋಚನೆಗಳನ್ನು ಮೋದಿ ಸರ್ಕಾರ ಬದಲಾಯಿಸಿದೆ. ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲನ್ನೂ ತಲುಪುತ್ತಿದೆ. ಇದೇ ದೇಶದ ಅಭಿವೃದ್ಧಿಗೆ ಕಾರಣ ಎಂದು ಹೇಳಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!