ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಬದಲಾಗಬೇಕು ಅಂತ ಬಿಜೆಪಿಯವರೇನು ಪ್ರಯತ್ನ ನಡೆಸುತ್ತಿಲ್ಲ ಕಾಂಗ್ರೆಸ್ ಪಕ್ಷದವರೇ ಅದರಲ್ಲಿ ಮಗ್ನರಾಗಿದ್ದಾರೆ, ಸಿದರಾಮಯ್ಯಮನವರು ಹತ್ತು ವರ್ಷ ಸಿಎಂ ಆಗಿರುತ್ತಾರೋ ಅಥವಾ 20 ವರ್ಷವೋ ಅದು ಕಾಂಗ್ರೆಸ್ ಗೆ ಸಂಬಂಧಿಸಿದ ವಿಷಯ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.
ಬೆಲೆಯೇರಿಕೆ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ಸಿದ್ದರಾಮಯ್ಯ ಹಿಂದಿನ ಎಲ್ಲ ಸಿಎಂಗಳ ದಾಖಲೆ ಮುರಿಯಲಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬಂದ ಬಳಿಕ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಬಸ್ ಟಿಕೆಟ್ ದರ ಮೊದಲಾದವು ಸೇರಿದಂತೆ ಒಟ್ಟು 16 ಆಯಾಮಗಳ ದರಗಳು ದುಪ್ಪಟ್ಟಾಗಿವೆ ಎಂದು ಟಾಂಗ್ ಕೊಟ್ಟಿದ್ದಾರೆ.