ಬಿಜೆಪಿಯವರಿಗೆ ಆಪರೇಷನ್ ಬಿಟ್ರೆ ಬೇರೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ, ವಿಜಯಪುರ:

ಬಿಜೆಪಿಯವರಿಗೆ ಆಪರೇಷನ್ ಬಿಟ್ರೆ ಬೇರೆ ಗೊತ್ತಿಲ್ಲ. ಆಪರೇಷನ್ ಅಂದ್ರೆ ಏನು ? ಹೇಳು ಆಪರೇಷನ್ ಅಂದ್ರೆ ಏನಯ್ಯಾ ? ಆಪರೇಷನ್ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳೊದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಗದೀಶ ಶೆಟ್ಟರ್, ವಿಜಯೇಂದ್ರ ಆಪರೆಷನ್ ಕುರಿತ ಹೇಳಿಕೆ ವಿಚಾರ ಬಗ್ಗೆ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಜನರಲ್ಲಿ ವಿಶ್ವಾಸ ಗಳಿಸೋದು ಗೊತ್ತಿಲ್ಲ. ಅವರು ಈ ಹಿಂದೇನೂ ಎರಡು ಸಲಿ ಹಾಗೆ ಮಾಡಿದಾರೆ. ಪೂರ್ಣ ಪ್ರಮಾಣದಲ್ಲಿ ಇವರು ಗೆದ್ದೆ ಇಲ್ಲ. ಅವರು ಯಾವಾಗಲೂ ಮೆಜಾರಿಟಿಯಿಂದ ಗೆದ್ದಿಲ್ಲ. ಆದರೆ 2013, 2023 ರಲ್ಲಿ ನಾವು ಕಾಂಗ್ರೆಸ್ ನವರು ಗೆದ್ದಿದ್ದೇವೆ. ನಾವು ಜನಮತ ಪಡೆದು ಬರ್ತೆವೆ, ಅವರು ಆಪರೇಷನ್ ಮಾಡಿ ಬರ್ತಾರೆ ಎಂದರು.

ಮಂಡ್ಯದಲ್ಲಿ ಹನುಮಧ್ವಜ ವಿವಾದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅವರು ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸ್ತೀನಿ ಅಂತ ಹೇಳಿ ಭಗವಾ ಧ್ವಜ ಹಾರಿಸ್ತಾರೆ. ಅವರಿಗೆ ರಾಷ್ಟ್ರ ಧ್ವಜದ ಬಗ್ಗೆ ಬದ್ಧತೆ ಇಲ್ಲ. ರಾಷ್ಟ್ರಧ್ವಜ 143 ಕೋಟಿ ಜನರ ಅಸ್ಮಿತೆ ಅದು. ಅದಕ್ಕೆ ಅದನ್ನು ಹಾರಿಸಬೇಡಿ ಅಂತಾರೆ. ಇವರು ಯಾವ ಭಾರತೀಯರು, ಯಾವ ದೇಶಭಕ್ತರು ? ಎಂದರು.

ಕಾಂಗ್ರೆಸ್ ನವರು ಕಾಶ್ಮೀರ ದಲ್ಲಿ ಗೌರವ ಕೊಡಲ್ಲಾ, ಮಂಡ್ಯದಲ್ಲಿ ಗೌರವ ಕೊಡ್ತಾರೆ ಎಂದು ಬಿಜೆಪಿ ಹೇಳಿಕೆ ವಿಚಾರಕ್ಕೆ, ನಾವು ಅಲ್ಲೂ ಗೌರವ ಕೊಡ್ತಿವಿ, ಇಲ್ಲೂ ಗೌರವ ಕೊಡ್ತಿವಿ. ರಾಷ್ಟ್ರಧ್ವಜ ಮಾಡಿದವರು ಕಾಂಗ್ರೆಸ್‌ನವರು, ಆವಾಗ ಎಲ್ಲಿ ಬಿಜೆಪಿ ಇತ್ತು ? ಎಂದರು.
ಗ್ಯಾರೆಂಟಿ ಯೋಜನೆಗಳು ಗ್ರ‍್ಯಾಂಡ್ ಸಕ್ಸಸ್ ಆಗಿವೆ. ಈಗಾಗಲೇ ರಾಜ್ಯದಲ್ಲಿ 1 ಕೋಟಿ 17 ಲಕ್ಷ ಮಹಿಳೆಯರಿಗೆ ಡಿಬಿಟಿ ಮೂಲಕ ಹಣ ಹಾಕಿದಿವಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!