ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ತಿಂಗಳಿನಿಂದ ಬಾಲಿವುಡ್ ತಾರೆಯರಿಗೆ ಜೀವ ಬೆದರಿಕೆ ಹಾಕಲಾಗುತ್ತಿದ್ದು,ಲಾರೆನ್ಸ್ ಬಿಷ್ಣೋಯ್ ಬೆದರಿಕೆಗೆ ಸಲ್ಮಾನ್ ಖಾನ್ ತುತ್ತಾಗಿದ್ದಾರೆ. ಶಾರುಖ್ ಖಾನ್‌ಗೂ ಈ ಗ್ಯಾಂಗ್‌ಸ್ಟರ್ ಜೀವ ಬೆದರಿಕೆ ಹಾಕಿತ್ತು. ಇದೀಗ ಮಿಥುನ್ ಚಕ್ರವರ್ತಿಗೆ ಕೂಡ ಜೀವ ಬೆದರಿಕೆ ಹಾಕಲಾಗಿದೆ.
ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಶಹಜಾದಾ ಭಟ್ಟಿ ಬಿಜೆಪಿ ನಾಯಕ ಮಿಥುನ್ ಗೆ ಜೀವ ಬೆದರಿಕೆ ಹಾಕಿದ್ದಾನೆ. 10-15 ದಿನಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳದಿದ್ದರೆ ಕೊಲ್ಲುವುದಾಗಿ ಹೇಳಿದ್ದಾನೆ.
ಮಿಥುನ್ ಚಕ್ರವರ್ತಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪಾಕ್ ಗ್ಯಾಂಗ್‌ಸ್ಟರ್ ಹೇಳಿಕೊಂಡಿದ್ದಾನೆ. ಅದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಜೀವ ಬೆದರಿಕೆ ಹಾಕಿದ್ದಾನೆ. ಪಾಕ್ ಗ್ಯಾಂಗ್‌ಸ್ಟರ್ ಮಿಥುನ್‌ಗೆ 10-15 ದಿನಗಳ ಗಡುವು ನೀಡಿದ್ದಾನೆ. ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳದಿದ್ದರೆ ಕೊಲ್ಲುವುದಾಗಿ ಹೇಳಿದ್ದಾನೆ.
ಗೃಹ ಸಚಿವರ ಮುಂದೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನಮ್ಮಲ್ಲಿ ಒಬ್ಬ ನಾಯಕ 70% ಮುಸ್ಲಿಮರು, 30% ಹಿಂದುಗಳು ಎಂದು ಹೇಳಿದ್ದಾರೆ. ಅವರನ್ನು ಕೊಂದು ಭಾಗೀರಥಿಗೆ ಎಸೆಯುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿ ಅವರಿಗೆ ಏನಾದರೂ ಹೇಳುತ್ತಾರೆಂದು ಭಾವಿಸಿದ್ದೆ. ಆದರೆ ಏನೂ ಆಗಲಿಲ್ಲ. ನಾನು ಮುಖ್ಯಮಂತ್ರಿ ಅಲ್ಲ. ಆದರೆ ಭಾಗೀರಥಿ ನಮ್ಮ ತಾಯಿ. ನಿಮ್ಮನ್ನೇ ನಿಮ್ಮ ಭೂಮಿಯಲ್ಲಿ ಹೂತು ಹಾಕುತ್ತೇನೆ ಜೀವ ಬೆದರಿಕೆ ಬಂದಿದೆ.