ಪರಿಷತ್ ಸ್ಥಾನಕ್ಕೆ ಬಿಜೆಪಿ ನಾಯಕಿ ಡಾ. ತೇಜಸ್ವಿನಿ ಗೌಡ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಬಿಜೆಪಿ ನಾಯಕಿ ಡಾ. ತೇಜಸ್ವಿನಿ ಗೌಡ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ತಮ್ಮ ಪರಿಷತ್ ಸ್ಥಾನದ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಕೆ ಮಾಡಿ, ಬಿಜೆಪಿಗೆ ಶಾಕ್‌ ನೀಡಿದ್ದಾರೆ.
ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ತೇಜಸ್ವಿನಿ ಗೌಡ ಎಲ್ಲೆಡೆಯೂ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದರು. ಎಲ್ಲಿಯೂ ಕೂಡ ಬಿಜೆಪಿಗೆ ಮುಜುಗರವಾಗಿವಂತೆ ನಡೆದುಕೊಂಡಿರಿಲಿಲ್ಲ. ಆದರೆ, ಇವರ ಅಧಿಕಾರಾವಧಿ ಜೂನ್‌ ವೇಳೆಗೆ ಕೊನೆಗೊಳ್ಳಲಿದೆ. ಮುಂಬರುವ ರಾಜ್ಯದ ಮಳೆಗಾಲದ ಅಧಿವೇಶನದ ಮುನ್ನವೇ ಅಧಿಕಾರ ಮುಗಿದು ಹೋಗಲಿದೆ. ಆದ್ದರಿಂದ ಇತ್ತೀಚೆಗೆ ನಡೆದ ಬಜೆಟ್ ಅಧಿಬವೇಶನದಲ್ಲಿ ಭಾವುಕರಾಗಿ ವಿದಾಯ ಭಾಷಣವನ್ನೂ ಮಾಡಿದ್ದರು. ಆದರೂ, ಅವರ ಅವಧಿ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬಾಕಿಯಿರುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ತೇಜಸ್ವಿನಿ ಗೌಡ ಅವರು ಬುಧವಾರ ಬೆಳಗ್ಗೆ ವಿಧಾನಸೌಧಕ್ಕೆ ಬಮದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಅಂಗೀಕಾರ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರಿ, ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ರಾಜೀನಾಮೆ ಕೊಟ್ಟಿದ್ದು, ಅಂಗೀಕಾರ ಮಾಡಿದ್ದೇನೆ. ಪರಿಷತ್ ಸದಸ್ಯರು ರಾಜೀನಾಮೆ ಸಲ್ಲಿಸಬಹುದು, ಇದಕ್ಕೆ ಸ್ಪಷ್ಟ ಕಾರಣ ಕೊಡಲೇಬೇಕು ಎಂದು ನಿಯಮವಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!