ELECTION RESULT| ಕಿತ್ತೂರ ಕರ್ನಾಟಕ ಭದ್ರಕೋಟೆಯನ್ನು ಕಳೆದುಕೊಂಡ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ಕೂತುಹಲ ಕೆರಳಿಸಿದ 2023 ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯದ ನಗಾರಿ ಬಾರಿಸಿದೆ. ಬಿಜೆಪಿಯ ಭದ್ರಕೋಟೆ ಎನ್ನಿಸಿದ ಕಿತ್ತೂರ ಕರ್ನಾಟಕ ಪ್ರದೇಶ ಈ ಬಾರಿ ಕಾಂಗ್ರೆಸ್ ಮುಷ್ಠಿಗೆ ಸೇರಿದೆ.

ಅತೀ ಹೆಚ್ಚು 18 ಮತಕ್ಷೇತ್ರ ಹೊಂದಿದ ಬೆಳಗಾವಿಯಲ್ಲಿ 11 ಕಾಂಗ್ರೆಸ್, 7 ಬಿಜೆಪಿ, ಬಾಗಲಕೋಟೆಯಲ್ಲಿ 5 ಕಾಂಗ್ರೆಸ್, 2 ಬಿಜೆಪಿ, ಧಾರವಾಡದಲ್ಲಿ 4 ಕಾಂಗ್ರೆಸ್, 3 ಬಿಜೆಪಿ, ಉತ್ತರ ಕನ್ನಡದಲ್ಲಿ 4 ಕಾಂಗ್ರೆಸ್, 2 ಬಿಜೆಪಿ, ವಿಜಯಪುರದಲ್ಲಿ 6 ಕಾಂಗ್ರೆಸ್, 1 ಬಿಜೆಪಿ, 1 ಜೆಡಿಎಸ್, ಹಾವೇರಿಯಲ್ಲಿ 5 ಕಾಂಗ್ರೆಸ್, 1 ಬಿಜೆಪಿ, ಗದಗನಲ್ಲಿ 2 ಕಾಂಗ್ರೆಸ್, 2 ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯ ಪ್ರಾಬಲ್ಯ ಕಿತ್ತೂರ ಕರ್ನಾಟಕ ಪ್ರದೇಶದಲ್ಲಿ ಕ್ಷೀಣಿಸಿದೆ.

ಕಿತ್ತೂರು ಕರ್ನಾಟಕ ಒಟ್ಟು ಮತ ಕ್ಷೇತ್ರ 56
ಕಾಂಗ್ರೆಸ್ -37
ಬಿಜೆಪಿ – 18
ಜೆಡಿಎಸ್ – 1

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!