October 16, 2026
Friday, October 16, 2026
spot_img

ಕಾಂಗ್ರೆಸ್‌ ಕಚೇರಿಗೆ ಬಂದ ಬಿಜೆಪಿ ಶಾಸಕ ಬಿಪಿ ಹರೀಶ್‌ ತಲೆಗೆ ಮೊಟ್ಟೆ ಒಡೆದ ಕಾರ್ಯಕರ್ತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಹರದ ಬಿಜೆಪಿ ಶಾಸಕ ಬಿಪಿ ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಸಂಗ ನಡೆದಿದೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಇಂದು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆ ತಿರುಗೇಟು ಎಂಬಂತೆ ಬಿಜೆಪಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿತ್ತು.ಶಾಸಕರ ಮೊಬೈಲಿಗೆ ಪ್ರತಿಭಟನೆ ಸ್ಥಳದ ಲೋಕೇಶನ್‌ ಕಳುಹಿಸಲಾಗಿತ್ತು. ಈ ಲೋಕೇಶನ್‌ ಆಧಾರದ ಮೇಲೆ ಬಿಪಿ ಹರೀಶ್‌ ಚಾಲಕ ಕ್ವೀನ್ಸ್‌ ರೋಡ್‌ ಬಳಿ ಹರೀಶ್‌ ಅವರನ್ನು ಬಿಟ್ಟಿದ್ದಾನೆ.

ಹರೀಶ್‌ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್‌ ಅವರನ್ನು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Must Read