ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು ಜೂನ್ 2024 ರವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ಗೃಹ ಸಚಿವ ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು ಜೂನ್ 2024 ರವರೆಗೆ ವಿಸ್ತರಿಸಲಾಗಿದ್ದು, ಈ ನಿರ್ಧಾರವನ್ನ ಬಿಜೆಪಿ ಕಾರ್ಯಕಾರಿಣಿ ಅಂಗೀಕರಿಸಿದೆ ಎಂದರು.
ಈ ಮೂಲಕ ಮುಂದಿನ ಚುನಾವಣೆಯನ್ನು ನಡ್ಡಾರವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ನಡ್ಡಾ ಅವರು ಜನವರಿ 2020 ರಲ್ಲಿ ಮೂರು ವರ್ಷಗಳ ಅವಧಿಗೆ ಪಕ್ಷದ ಮುಖ್ಯಸ್ಥರಾದರು. ಈ ತಿಂಗಳು ಕೊನೆಗೊಳ್ಳಬೇಕಿತ್ತು. ಆದಾಗ್ಯೂ, ಈಗ ಪಕ್ಷವು ಸಾರ್ವತ್ರಿಕ ಚುನಾವಣೆಯ ನಂತರ ಅವಧಿಯನ್ನ 2024 ರವರೆಗೆ ವಿಸ್ತರಿಸಿದೆ.