Sunday, February 5, 2023

Latest Posts

100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರ: ಜಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹರಿಯಾಣದ (Haryana) ಫತೇಹಾಬಾದ್‌ನಲ್ಲಿ ಆಧ್ಯಾತ್ಮಿಕ ಹೆಸರಿನಲ್ಲಿ ಪೋರ್ನ್ ಇಂಡಸ್ಟ್ರಿ ನಡೆಸುತ್ತಿದ್ದ ಬಿಲ್ಲುರಾಮ್ ಅಕಾ ಬಾಬಾ ಅಮರಪುರಿ, ಅಕಾ ಜಲೇಬಿ ಬಾಬಾ (Jalebi Baba)ಗೆ ನ್ಯಾಯಾಲಯವು 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈತ 100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿ ನಂತರ ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ತನ್ನ ಅಧ್ಯಾತ್ಮ ಆಶ್ರಮದ ಹೆಸರಿನಲ್ಲಿ ಭೂತೋಚ್ಚಾಟನೆ ಮತ್ತು ತಂತ್ರ-ಮಂತ್ರದ ಮಾಡಿ ತನ್ನ ಕಪಿಮುಷ್ಠಿಯಲ್ಲಿ ಸಿಕ್ಕಿಬಿದ್ದ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು.

ಮಹಿಳೆಯರ ರಹಸ್ಯವಾಗಿ ಅಶ್ಲೀಲ ಚಿತ್ರಗಳನ್ನು ತಯಾರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಆರೋಪದ ಮೇಲೆ ಫತೇಹಾಬಾದ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಲ್ವಂತ್ ಸಿಂಗ್ ಬಾಬಾಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 35,000 ರೂ. ದಂಡ ವಿಧಿಸಿದ್ದಾರೆ.

ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿ 90 ಹುಡುಗಿಯರ 120 ಕ್ಕೂ ಹೆಚ್ಚು ಅಶ್ಲೀಲ ಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 13, 2017 ರಂದು, 20 ವರ್ಷಗಳಿಂದ ನಡೆಯುತ್ತಿರುವ ಈ ಅಂಗಡಿಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಧೈರ್ಯ ತೋರಿ ತೋಹಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬಾಬಾನನ್ನು ಬಂಧಿಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!