ವಿಜಯಪುರ ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಬೇಕಿದೆ 4 ಸದಸ್ಯರ ಬಲ!

ಹೊಸದಿಗಂತ ವರದಿ ವಿಜಯಪುರ:
ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಅಧಿಕಾರ ಚುಕ್ಕಾಣಿ ಹಿಡಿಯಲು ಇನ್ನು 4 ಅಭ್ಯರ್ಥಿಗಳ ಬಲ ಮಾತ್ರ ಹೊಂದಬೇಕಿದ್ದು, ಮ್ಯಾಜಿಕ್ ಸಂಖ್ಯೆ 21 ಸಂಪಾದಿಸುವತ್ತ ರಾಜಕೀಯ ಪಕ್ಷಗಳು ಚಿತ್ತ ನೆಟ್ಟಿವೆ.
ಮಹಾನಗರ ಪಾಲಿಕೆಗೆ 35 ಸದಸ್ಯರು, 3 ಶಾಸಕರು, 1 ಸಂಸದರು ಹಾಗೂ 2 ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 41 ಸದಸ್ಯರ ಬಲಾಬಲ ಹೊಂದಿದೆ. ಈ ಪೈಕಿ ಮ್ಯಾಜಿಕ ಸಂಖ್ಯೆ 21 ಸದಸ್ಯರ ಬಲ ಹೊಂದಿದ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ.
ಸದ್ಯ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಐಎಂಐಎಂ 2, ಜೆಡಿಎಸ್ 1 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿ ಅಧಿಕಾರ ಹಿಡಿಯಬೇಕಾದರೆ ಇನ್ನು 4 ಅಭ್ಯರ್ಥಿಗಳ ಬಲ ಹೊಂದಬೇಕು.
ಗೆಲುವು ಸಾಧಿಸಿದ ಅಭ್ಯರ್ಥಿ, ವಾರ್ಡ್ ನಂ. 1 ಆಶೀಫ್ ಶಾನವಾಲೆ (ಕಾಂಗ್ರೆಸ್), ವಾರ್ಡ್ ನಂ. 2 ಅಲ್ತಾಪ್ ಇಟಗಿ (ಪಕ್ಷೇತರ), ವಾರ್ಡ್ ನಂ. 3 ಸುನೀತಾ ಒಡೆಯರ (ಬಿಜೆಪಿ), ವಾರ್ಡ್ ನಂ. 4 ರಾಜು ಚವ್ಹಾಣ (ಜೆಡಿಎಸ್), ವಾರ್ಡ್ ನಂ. 5 ಕರಡಿ ಮಡಿವಾಳಪ್ಪ ಸಿದರಾಮಪ್ಪ (ಬಿಜೆಪಿ), ವಾರ್ಡ್ ನಂ. 6 ಮಳುಗೌಡ ಪಾಟೀಲ (ಬಿಜೆಪಿ), ವಾರ್ಡ್ ನಂ. 7 ರಾಹುಲ್ ಜಾಧವ (ಬಿಜೆಪಿ), ವಾರ್ಡ್ ನಂ. 8 ಅಶೋಕ ನ್ಯಾಮಗೌಡ (ಪಕ್ಷೇತರ), ವಾರ್ಡ್ ನಂ. 9 ರಾಜಶೇಖರ ಮಗಿಮಠ (ಬಿಜೆಪಿ), ವಾರ್ಡ್ ನಂ. 10 ಕುಮಸಿ ಸುನಂದಾ ಸಂಗೊಂಡಪ್ಪ (ಬಿಜೆಪಿ), ವಾರ್ಡ್ ನಂ. 11 ವಿಠ್ಠಲ ಹೊಸಪೇಟ (ಬಿಜೆಪಿ), ವಾರ್ಡ್ ನಂ. 12 ರಶ್ಮಿ ಕೋರಿ (ಬಿಜೆಪಿ), ವಾರ್ಡ್ ನಂ. 13 ದೇವಗಿರಿ ರಾಧಾಬಾಯಿ ಮೋಹನ್ (ಬಿಜೆಪಿ), ವಾರ್ಡ್ ನಂ. 14 ಹನುಮಂತ ಗೋಸಾವಿ (ಬಿಜೆಪಿ), ವಾರ್ಡ್ ನಂ. 15 ಸ್ವಪ್ನಾ ಕಣಮುಚನಾಳ (ಬಿಜೆಪಿ), ವಾರ್ಡ್ ನಂ. 16 ಅಂಜುಮಾರ್ ಮನಗೂಳಿ (ಕಾಂಗ್ರೆಸ್), ವಾರ್ಡ್ ನಂ. 17 ಸುಮಿತ್ರಾ ಜಾಧವ (ಪಕ್ಷೇತರ), ವಾರ್ಡ್ ನಂ. 18 ದಿನೇಶ ಹಳ್ಳಿ (ಕಾಂಗ್ರೆಸ್), ವಾರ್ಡ್ ನಂ. 19 ನಿಶಾತ್ ನದಾಫ್ (ಪಕ್ಷೇತರ), ವಾರ್ಡ್ ನಂ. 20 ಶಹೀನ್ ಬಾಂಗಿ (ಕಾಂಗ್ರೆಸ್), ವಾರ್ಡ್ ನಂ. 21 ಮಲ್ಲಿಕಾರ್ಜುನ ಗಡಗಿ (ಬಿಜೆಪಿ), ವಾರ್ಡ್ ನಂ. 22 ಪ್ರೇಮಾನಂದ ಬಿರಾದಾರ (ಬಿಜೆಪಿ), ವಾರ್ಡ್ ನಂ. 23 ಮಹ್ಮದ್ ಇರ್ಫಾನ್ ನಾಡೇವಾಲೆ (ಕಾಂಗ್ರೆಸ್), ವಾರ್ಡ್ ನಂ. 24 ವಿಮಾಲಾ ಖಾನೆ (ಪಕ್ಷೇತರ), ವಾರ್ಡ್ ನಂ. 25 ಸುಫಿಯಾ ವಾಟಿ (ಎಐಎಂಐಎಂ), ವಾರ್ಡ್ ನಂ. 26 ಕಿರಣ ಪಾಟೀಲ (ಬಿಜೆಪಿ), ವಾರ್ಡ್ ನಂ. 27 ಶಹಿಸ್ತಾ ಕುರೇಶಿ (ಕಾಂಗ್ರೆಸ್), ವಾರ್ಡ್ ನಂ. 28 ರಿಜ್ವಾನ್ ಬಾನು ಇನಾಮಾದಾರ್ (ಎಐಎಂಐಎಂ), ವಾರ್ಡ್ ನಂ. 29 ವಿಜಯಕುಮಾರ ಬಿರಾದಾರ (ಬಿಜೆಪಿ), ವಾರ್ಡ್ ನಂ. 30 ಅಪ್ಪು ಪೂಜಾರಿ (ಕಾಂಗ್ರೆಸ್), ವಾರ್ಡ್ ನಂ. 31 ಸಿದರಾ ಬಂದೇನವಾಜ್ ಬೀಳಗಿ (ಕಾಂಗ್ರೆಸ್), ವಾರ್ಡ್ ನಂ. 32 ಶಿವರುದ್ರ ಬಾಗಲಕೋಟ (ಬಿಜೆಪಿ), ವಾರ್ಡ್ ನಂ. 33 ಆರತಿ ಶಹಾಪುರ (ಕಾಂಗ್ರೆಸ್), ವಾರ್ಡ್ ನಂ.34 ಮೆಹಜಬಿನ್ ಹೊರ್ತಿ (ಕಾಂಗ್ರೆಸ್), ವಾರ್ಡ್ ನಂ. 35 ರಾಜಶೇಖರ ಕುರಿಯವರ (ಬಿಜೆಪಿ) ಅವರು ಆಯ್ಕೆಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here