ಎಸ್.ಎಸ್.ಕೆ ಸಮಾಜ ಹಿಂದಿನಿಂದಲೂ ಬಿಜೆಪಿಗೆ ಸಹಕಾರ ನೀಡುತ್ತಿದೆ : ಜಗದೀಶ ಶೆಟ್ಟರ್

ಹೊಸದಿಗಂತ ವರದಿ ಹುಬ್ಬಳ್ಳಿ:

ಎಸ್.ಎಸ್.ಕೆ ಸಮಾಜ ಹಿಂದಿನಿಂದಲೂ ಬಿಜೆಪಿಗೆ ಸಹಕಾರ ನೀಡುತ್ತಿದೆ. ಪಕ್ಷವು ಸಹ ಆ ಸಮಾಜದವರಿಗೆ ಉತ್ತಮ‌ ಸ್ಥಾನ ಮಾನ ನೀಡುತ್ತಿದ್ದು, ಬರುವ ದಿನಗಳಲ್ಲಿಯೂ ಸಹ ನೀಡಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿಯ ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಸಹಸ್ರಾರ್ಜುನ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದೆಯೂ ಸಹ ಈ ಸಮಾಜಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಆ ಸಮುದಾಯದವರು ಸಮಾಜ ಉನ್ನತ ಉದ್ಯೋಗದಲ್ಲಿದ್ದಾರೆ. ಅದೇ ರೀತಿ ಐಎಎಸ್, ಐಪಿಎಸ್ ಉದ್ಯೋಗ ಪಡೆಯಬೇಕು ಎಂದು ಹಾರೈಸಿದರು.

ಪಕ್ಷದ ಕಚೇರಿಯಲ್ಲಿ ಸಹಸಾರ್ಜುನ ಮಹರಾಜರ ಜಯಂತಿ ಹಲವು ವರ್ಷದಿಂದ ಆಚರಿಸುವುದು ಖಷಿಯ ವಿಚಾರ. ಅವರ ಜಯಂತಿ ರೂಪದಲ್ಲಿ ಎಸ್.ಎಸ್.ಕೆ‌ ಸಮಾಜ ಸಂಘಟನೆಯಾಗಯತ್ತಿದೆ. ಸಹಸಾರ್ಜುಜನ ಆದರ್ಶ ಹಾಗೂ ಜೀವನ ಶೈಲಿ ಇಂದಿನ ಜನತೆಗೆ ರೂಢಿಸಿಕೊಳ್ಳಬೇಕು. ಈ ಸಮಾಜದ ಹಿಂದೂತ್ವ ವಿಚಾರವಾಗಿ ಯಾವತ್ತು ಮುಂದೆ ಇರುತ್ತಾರೆ ಎಂದರು.

ಎಸ್.ಎಸ್.ಕೆ ಸಮಾಜದ ಹಿರಿಯ ಮುಖಂಡ ನಿಲಕಂಠ ಸಾ ಜಡಿ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಎಸ್.ಎಸ್.ಕೆ ಸಮಾಜ ರಾಜಕೀಯವಾಗಿ ಸಹಕಾರ ನೀಡುತ್ತಿದೆ. ಆದರೆ ಸದ್ಯ ಬಿಜೆಪಿ ರಾಜಕೀಯವಾಗಿ‌ ಸಮಾಜದವರನ್ನು ಕಡೆಗಣಿಸುತ್ತಿದೆ.‌ ಆದರಿಂದ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ‌ ಮಾಡಿದರು.ವ

ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾಹುಕಾರ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುಗಿ, ವೀರಭದ್ರಪ್ಪ ಹಾಲಹರವಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ಹನಮಂತ ಸಾ ನಿರಂಜನ, ರವಿ ನಾಯಕ ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!