ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಆಸಕ್ತಿ ಇಲ್ಲ. ಬಿಜೆಪಿ ಅವರಿಗೆ ರಾಜಕೀಯ ಬಿಟ್ಟು ಬೇರೇನೂ ಬೇಕಾಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಅವರಲ್ಲಿ ಒಗ್ಗಟ್ಟು ಇಲ್ಲ, ಅದಕ್ಕೆ ಏನೇನೋ ಮಾಡುತ್ತಿದ್ದಾರೆ. ಅವರೇನೇ ಚರ್ಚೆ ಮಾಡಿದರೂ ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ಅವರು ಯಾವಾಗ ಅನುಮತಿ ಕೊಡುತ್ತಾರೆ ಅಂತಾ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಕೆಲಸ ಪ್ರಾರಂಭ ಮಾಡುತ್ತೀವಿ. ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ, ಕೆಲಸ ಮಾಡೋರು ನಾವು. ಅವರಿಂದ ಸಣ್ಣ ಅರಣ್ಯ ಅನುಮತಿ ಸಿಗುವ ಭರವಸೆ ಇದೆ ಎಂದರು.