ಸೋಮವಾರಪೇಟೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಹೊಸದಿಗಂತ ವರದಿ ಮಡಿಕೇರಿ: 

ಸೋಮವಾರಪೇಟೆ ಪಟ್ಟಣದಲ್ಲಿ ಇಂದು ಬಿಜೆಪಿ ತನ್ನ ಬೃಹತ್ ಶಕ್ತಿ ಪ್ರದರ್ಶಿಸಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗದರಿದ್ದು ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸಲು ಪ್ರಯತ್ನಿಸುತ್ತಿವೆಯಾದರೂ ಬಿಜೆಪಿ ಈಗಾಗಲೇ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನ ಶಕ್ತಿಪ್ರದರ್ಶಿಸುವ ಮೂಲಕ ಮತದಾರ ಮನಸಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದೆ.

ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಇಂದು ಜಿಲ್ಲಾ ಯುವಮೋರ್ಚಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಿದ್ದ ಸಾವಿರ ಸಂಖ್ಯೆಯ ಬೈಕ್ ಜಾತಾ ಕೆಲವು ಗಂಟೆಗಳ ಕಾಲ ಸಂಚಾರ ವ್ಯವಸ್ಥೆಯನ್ನು ವ್ಯತ್ಯಯ ಗೊಳಿಸಿತು. ಎಲ್ಲಿ ನೋಡಿದರಲ್ಲಿ ಬಿಜೆಪಿ ಧ್ವಜ, ನಾಯಕರ ಕಟೌಟ್‌ಗಳು, ಬೈಕ್‌ಗಳ ಸದ್ದು, ಜಯಕಾರ ಎಲ್ಲೆಡೆ ಮಾರ್ದನಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!