ಹೊಸದಿಗಂತ ವರದಿ ಕುಂದಗೋಳ:
ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಪೇಡಾ ನಗರಿಯಲ್ಲಿ ಸಿಎಂ ಅದ್ದೂರಿ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಪರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಮಾಡುತ್ತಿದ್ದಾರೆ.
ಕುಂದಗೋಳ ಬಸ್ ನಿಲ್ದಾಣದ ಹತ್ತಿರದ ಕನಕ ದಾಸರ ಪುತ್ಥಳಿಕೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋಗೆ ಚಾಲನೆ ನೀಡಿದರು.
ಸಾವಿರಾರೂ ಜನ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಅಭ್ಯರ್ಥಿ ಎಂ.ಆರ್. ಪಾಟೀಲ ಅವರ ಪರವಾಗಿ ಘೋಷಣೆ ಕೂಗಿದರು.
ಈ ಸಮಯದಲ್ಲಿ ಬಿಜೆಪಿ ನಾಯಕರಾದ ಸಿ.ಎಂ. ಉದಾಸಿ, ಹಿಂದೂಳಿದ ವರ್ಗದ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಸಾಥ್ ನೀಡಿದರು. ರಸ್ತೆ ಇಕ್ಕೆಲಗಳಲ್ಲಿ ಅಂಗಡಿ ಮುಗಟ್ಟಿನಲ್ಲಿ ನಿಂತಿದ್ದ ಸಾರ್ವಜನಿಕರತ್ತ ಕೈ ನಾಯಕರು ಕೈ ಬೀಸಿದರು. ಡೊಳ್ಳು, ವಾದ್ಯ ಮೇಳ ಮೆರವಣಿಗೆ ಕಾರ್ಯಕರ್ತ ಪ್ರೋತ್ಸಾಹ ನೀಡಿದವು. ಕನಕದಾಸರ ವೃತ್ತದಿಂದ ಆರಂಭವಾದ ರೋಡ್ ಶೋ ಮೂರಗಂಡಿ ವೃತ್ತದವರೆಗೂ ಸಾಗಿತು.