ಒಡಿಶಾದಲ್ಲಿ ಅಪರೂಪದ ಮೆಲನಿಸ್ಟಿಕ್ ಹುಲಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಕೋರ್ ಪ್ರದೇಶದಲ್ಲಿ ಅಪರೂಪದ ಮೆಲನಿಸ್ಟಿಕ್ ಹುಲಿಯೊಂದು ಮೃತಪಟ್ಟಿದೆ.

ಈ ಹಿಂದೆ ಮೆಲಿನಿಸ್ಟಿಕ್ ಹುಲಿಯ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಮೂರುವರೆ ವರ್ಷದ ಗಂಡು ಹುಲಿ ಏಕಾಏಕಿ ಮೃತಪಟ್ಟಿದ್ದು, ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇನ್ನೊಂದು ಹುಲಿಗೂ ಗಾಯಗಳಾಗಿದ್ದು, ಕಾದಾಟದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಹುಲಿಗಳು ಮೂರು ವರ್ಷದ ನಂತರ ಕಾಡಿನಲ್ಲಿ ಹೆಚ್ಚಾಗಿ ಓಡಾಡುತ್ತವೆ, ಆ ವೇಳೆ ಎದುರು ಸಿಗುವ ಹುಲಿಗಳ ಜತೆ ಕಾದಾಟ ನಡೆಸುತ್ತವೆ. ಈ ಕಾದಾಟದ ವೇಳೆ ಹುಲಿ ಮೃತಪಟ್ಟಿರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!