ಬಿಜೆಪಿಯನ್ನು ರಾಜ್ಯದಲ್ಲಿಯೇ ಬೆಳೆಯಲು ಬಿಡುವುದಿಲ್ಲ: ಸಚಿವ ಪ್ರಿಯಾಂಕ್ ಖಗೆ೯

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಬಿಜೆಪಿ ಪಕ್ಷವನ್ನು ಚಿತ್ತಾಪುರ ಸೇರಿದಂತೆ ರಾಜ್ಯದಲ್ಲಿಯೇ ಬೆಳೆಯಲು ಬಿಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖಗೆ೯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಬಿಜೆಪಿಯಲ್ಲಿ ಅಕ್ಕಿ ಕಳ್ಳತನ, ಹಾಲಿನ ಪುಡಿ ಕಳ್ಳತನ‌ ಮಾಡುವರಿಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ, ಅಂತಹವರನ್ನು ನಾವು ಜೈಲಿಗೆ ಕಳುಹಿಸುತ್ತೆವೆ.ಇನ್ನೂ ಕಲಬುರಗಿ ಜಿಲ್ಲೆಯ ಚಿತ್ತಾಪುರ‌ ಮತ್ತು ಜೇವರ್ಗಿ ಕ್ಷೇತ್ರದ ಎರಡು ಟಿಕೆಟ್ ಗಳನ್ನು ಎಂಎಲ್ ಸಿ ಎನ್.ರವಿಕುಮಾರ್ ಅವರು ಮಾರಾಟ‌ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭಾ ಚುನಾವಣಾ ಮುಗಿದ ಮೇಲೆ ಇಷ್ಟು ದಿನ ಬರಲಾರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ,ಇದೀಗ ಯಾಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!