ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 35 ವರ್ಷದ ಬಿಜೆಪಿ ಕಾರ್ಯಕರ್ತನನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ.
ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ ನಕ್ಸಲರಿಂದ ಐದನೇ ನಾಗರಿಕ ಹತ್ಯೆ ಇದಾಗಿದೆ. ಪೊಲೀಸ್ ಮಾಹಿತಿದಾರನಂತೆ ವರ್ತಿಸುತ್ತಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತ ಕುಡಿಯಮ್ ಮಾಡೋ ಅವರನ್ನು ನಕ್ಸಲರು ಮಂಗಳವಾರ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಫರ್ಸೆಗಢ್ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನ್‌ಪಲ್ಲಿ ಗ್ರಾಮದಲ್ಲಿರುವ ಮಾಡೋ ಅವರ ಮನೆಗೆ ನುಗ್ಗಿದ ನಕ್ಸಲೀಯರ ಗುಂಪು, ಅವರನ್ನು ಹೊರಗೆ ಎಳೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.