ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಾರ್ದನರೆಡ್ಡಿ, ಶ್ರೀರಾಮುಲು ಸೇರಿದಂತೆ ಬಿಜೆಪಿಯಲ್ಲಿನ ಆಂತರಿಕ ಗೊಂದಲ ಇನ್ನು 8-10 ದಿನಗಳಲ್ಲಿ ಬಗೆಹರಿಯಲಿದೆ ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಶ್ರೀರಾಮುಲು-ಜನಾರ್ದನ ರೆಡ್ಡಿ ಮತ್ತು ಯತ್ನಾಳ್-ವಿಜಯೇಂದ್ರ ಕಿತ್ತಾಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಆಗ್ತಿರೋದು ಸತ್ಯ. ಬೆಂಕಿ ಇಲ್ಲದೆ ಹೊಗೆ ಆಡೊಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇವೆ. ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತಾರೆ. ರಾಮುಲು ವಾಲ್ಮೀಕಿ ಸಮುದಾಯದ ನಾಯಕ. ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. 8-10 ದಿನಗಳಲ್ಲಿ ಎಲ್ಲಾ ಗೊಂದಲ ನಿವಾರಣೆ ಆಗುತ್ತದೆ ಎಂದು ಹೇಳಿದರು.