ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಅವರನ್ನು ಬಿಜೆಪಿ ಮಂಗಳವಾರ ಆಯ್ಕೆ ಮಾಡಿದೆ. ಜೊತೆಗೆ ಕೆ.ವಿ. ಸಿಂಗ್ ದೇವ್ ಮತ್ತು ಪಾರ್ವತಿ ಪರಿದಾ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಝಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದ್ದಾರೆ.

ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಮಾಝಿ ಕಿಯೋಂಜಾರ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದಾರೆ. ಮೋಹನ್ ಚರಣ್ ಮಾಝಿ ಖನಿಜಗಳ ಗಣಿಗಳಿಂದ ಸಂಪದ್ಭರಿತವಾಗಿರ ಕೆಂದುಜಾರ್ ಜಿಲ್ಲೆಯ ಪ್ರಬಲ ಮತ್ತು ಫೈರ್ ಬ್ರಾಂಡ್ ಬುಡಕಟ್ಟು ನಾಯಕರಾಗಿದ್ದಾರೆ.
ಮೋಹನ್ ಮಾಝಿ ಅವರನ್ನು ನಿಷ್ಠಾವಂತ ಬಿಜೆಪಿ ಸದಸ್ಯ ಮತ್ತು ಬಲವಾದ ನಾಯಕ ಎಂದು ಪರಿಗಣಿಸಲಾಗಿದೆ.

ಬಿಜೆಪಿ ಮೊದಲ ಸಿಎಂ
ಒಡಿಶಾದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿರುವ ಮಾಝಿ ಅವರಿಗೆ ಮೊದಲ ಬಾರಿಗೆ ಶಾಸಕಿ ಪ್ರಭಾತಿ ಪರಿದಾ ಮತ್ತು ಆರು ಬಾರಿ ಶಾಸಕ ಕೆ.ವಿ.ಸಿಂಗ್ ದೇವ್ ಎಂಬ ಇಬ್ಬರು ಉಪಮುಖ್ಯಮಂತ್ರಿಗಳು ಸಿಗಲಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್ ಅವರು ,ಎಲ್ಲಾ ಹಿರಿಯ ನಾಯಕರು ಮತ್ತು ಹೊಸದಾಗಿ ಆಯ್ಕೆಯಾದ ಸಂಸದರು ಮತ್ತು ಶಾಸಕರೊಂದಿಗೆ ಚರ್ಚಿಸಿದ ನಂತರ ಅವರ ಹೆಸರು ಅಂತಿಮಗೊಳಿಸಲಾಗಿದೆ.

147 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತವನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!