May 9, 2026
Saturday, May 9, 2026
spot_img

ಬಿಜೆಪಿ ಹೊಸ ಅಧ್ಯಾಯ: ಬಂಗಾಳದ ಜನತೆಗೆ ಮಂಡಿಯೂರಿ ನಮಸ್ಕರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೋಲ್ಕತ್ತಾದಲ್ಲಿ ನಡೆದ ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಅವರೊಂದಿಗೆ ಐವರು ಸಚಿವರೂ ಪ್ರಮಾಣವಚನ ಸ್ವೀಕರಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾದರು.

ಸಮಾರಂಭದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದ ಜನರು ನೀಡಿದ ಅಪಾರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಜನರ ಆಶೀರ್ವಾದವೇ ಈ ಗೆಲುವಿನ ಬಲ ಎಂದು ಹೇಳಿದ ಅವರು, ವೇದಿಕೆಯಲ್ಲೇ ಕೈಮುಗಿದು ನಮಸ್ಕರಿಸಿ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದರು. ಈ ದೃಶ್ಯ ಸಮಾರಂಭದ ಪ್ರಮುಖ ಕ್ಷಣವಾಗಿ ಗಮನಸೆಳೆಯಿತು.

ಇದನ್ನೂ ಓದಿ:

ಇದೇ ವೇಳೆ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಸಚಿವ ಸಂಪುಟ ಸದಸ್ಯರನ್ನು ಪ್ರಧಾನಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು, ‘ಮೋದಿ, ಮೋದಿ’ ಘೋಷಣೆಗಳು ಮೈದಾನದೆಲ್ಲೆಡೆ ಮೊಳಗಿದವು. ಹಿರಿಯ ಪಕ್ಷ ಕಾರ್ಯಕರ್ತರ ಆಶೀರ್ವಾದವನ್ನೂ ಪಡೆದ ಪ್ರಧಾನಿ, ಸಂಘಟನೆಯ ಶ್ರಮದಿಂದಲೇ ಈ ಐತಿಹಾಸಿಕ ಗೆಲುವು ಸಾಧ್ಯವಾಗಿದೆ ಎಂಬ ಸಂದೇಶ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !