ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ಹೇಳಿಕೆಗೆ ಆಡಳಿತಾರೂಢ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧ ಎದುರಿಸುತ್ತಿದೆ. ಈ ಕ್ರಮದಲ್ಲಿ ಬಿಜೆಪಿ ವಕ್ತಾರರು ಟಿವಿ ಚರ್ಚೆಗಳಲ್ಲಿ ಭಾಗವಹಿಸುವ ನಾಯಕರ ಮೇಲೆ ಹೊಸ ನಿಯಮಗಳನ್ನು ಹೇರಿದ್ದಾರೆ.
ಹೊಸ ನಿಯಮಗಳು
- ಟಿವಿ ಚರ್ಚೆಗಳಲ್ಲಿ ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ಮಾತ್ರ ಭಾಗವಹಿಸಬೇಕೆಂದು ನಿರ್ದೇಶನ
- ಯಾವುದೇ ಧರ್ಮ ಅಥವಾ ಚಿಹ್ನೆಗಳನ್ನು ಅವಹೇಳನ ಮಾಡುವ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಟೀಕೆ ಮಾಡದಂತೆ ಎಚ್ಚರಿಕೆ
- ಪ್ರಮುಖ ಚರ್ಚೆಯ ವೇಳೆ ಬಿಜೆಪಿ ಪ್ಯಾನಲಿಸ್ಟ್‌ಗಳು ಗಡಿ ದಾಟದಂತೆ ನಿರ್ಬಂಧ
- ತಮ್ಮ ಭಾಷೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆತಂಕ ಮತ್ತು ಭಾವನೆಗಳಿಗೆ ಒಳಗಾಗದಂತೆ ಸೂಚನೆ
- ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರೂ ಸಹ ಅದು ಪಕ್ಷದ ಸಿದ್ಧಾಂತ ಮತ್ತು ಆದರ್ಶಗಳನ್ನು ಉಲ್ಲಂಘಿಸುವಂತಿರಬಾರದು
- ಟಿವಿ ಚರ್ಚೆಯ ವಿಷಯವನ್ನು ಮೊದಲೇ ತಿಳಿದುಕೊಂಡು ಅದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಬಿಜೆಪಿ ವಕ್ತಾರರಿಗೆ ಸೂಚನೆ
ಪಕ್ಷದ ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ಅಜೆಂಡಾ ವಿರುದ್ಧ ನಡೆದುಕೊಳ್ಳುವಂತಿಲ್ಲ. ಯಾರ ಬಲೆಗೂ ಬೀಳದಂತೆ ಮುಂಜಾಗ್ರತೆ ವಹಿಸಬೇಕು ಎಂದು ಬಿಜೆಪಿ ಮೂಲಗಳು ತಿಳಿಸಿವೆ.