ದೆಹಲಿಯ ನೂತನ ಮೇಯರ್ ಆಗಿ ಬಿಜೆಪಿಯ ರಾಜಾ ಇಕ್ಬಾಲ್ ಸಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ದೆಹಲಿಯ ನೂತನ ಮೇಯರ್ ಆಗಿ ಬಿಜೆಪಿಯ ರಾಜಾ ಇಕ್ಬಾಲ್ ಸಿಂಗ್ ಆಯ್ಕೆಯಾಗಿದ್ದು, ಪಕ್ಷದ ಕೌನ್ಸಿಲರ್‌ಗಳಲ್ಲಿ ಸಂಭ್ರಮಾಚರಣೆ ಮನೆಮಾಡಿದೆ.

ರಾಜಾ ಇಕ್ಬಾಲ್ ಸಿಂಗ್ ಅವರು ಎಂಸಿಡಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು ಈ ಹಿಂದೆ ಉತ್ತರ ಎಂಸಿಡಿ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು.

“ದೆಹಲಿಯ ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವುದು, ಕಸದ ಬೆಟ್ಟಗಳನ್ನು ತೆಗೆದುಹಾಕುವುದು, ನೀರಿನ ಸಮಸ್ಯೆ ಪರಿಹರಿಸುವುದು ಮತ್ತು ದೆಹಲಿಯ ಜನರಿಗೆ ಎಲ್ಲಾ ಮೂಲಭೂತ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮುಖ್ಯ ಗುರಿಯಾಗಿರುತ್ತದೆ. ನಾವೆಲ್ಲರೂ ಸಂಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ನೂತನ ಮೇಯರ್ ರಾಜಾ ಇಕ್ಬಾಲ್ ಸಿಂಗ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!