ಹೊಸದಿಗಂತ ವರದಿ ಹಾವೇರಿ:
ಇಂದು ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಆಗಬೇಕಾಗಿದೆ. ರೈತರ ಪರವಾಗಿ ನಾವು ಧ್ವನಿ ಎತ್ತಬೇಕಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಕರೆ ನೀಡಿದರು.
ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕರೆ ನೀಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿ, ಮುಂದಿನ ಒಂದೂವರೆ ವರ್ಷಗಳ ಕಾಲ ನಾವು ಕಾರ್ಯಕರ್ತರು ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಇಲ್ಲ. ಇಂತಹ ದರಿದ್ರ ಹಿಂದೂ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಮನೆಯಲ್ಲಿ ಕೂರಿಸುವ ಕೆಲಸ ಮಾಡಬೇಕಿದೆ. ಈ ಹೋರಾಟ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಪ್ರತಿಯೊಂದು ಹಳ್ಳಿಗೂ ಕೂಡ ಈ ಹೋರಾಟವನ್ನು ತಲುಪಿಸಿಹೋರಾಡೋಣ ಎಂದರು.
ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥಿತ ನಾಶವಾಗಿದೆ. ಗೂಂಡಾ ಸಂಸ್ಕೃತಿ ಮುಂದುವರೆದಿದೆ. ಸವಣೂರಲ್ಲಿ ಶಿಕ್ಷಕನನ್ನು ಬಟ್ಟೆ ಬಿಚ್ಚಿ ಥಳಿಸಿದ್ದಾರೆ.
ಹಾನಗಲ್ಲ ಮಾಸ್ ರೇಪ್ ಮಾಡಿದವರ ಮೆರವಣಿಗೆ, ನರೇಗಲ್ಲ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಕೈ ಕತ್ತರಿಸಲು ಮುಂದಾಗಿದ್ದಾರೆ. ರಟ್ಟೀಹಳ್ಳಿ ಹಾಡು ಹಗಲೇ ಕೊಲೆ, ರಾಣೆಬೆನ್ನೂರ ಕಸಾಯಿಖಾನೆಯಲ್ಲಿ ಗೋ ಹತ್ಯೆ ವೇಳೆ ಹಿಂದೂ ಸಂಘಟನೆ, ಭಜರಂಗದಳದ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಇವರೆಲ್ಲ ಡಿ.ಕೆ.ಶಿ ಬ್ರದರ್ಸ್ ಹೀಗಾಗಿ ಅಲ್ಪಸಂಖ್ಯಾತರ ಮೇಲಿನ ಎಲ್ಲಾ ಪ್ರಕರಣ ವಾಪಸ್ ಪಡೆದಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:
ದೌರ್ಜನ್ಯ ಕ್ಕೆ ಒಳಗಾದವರು ಹಿಂದುಳಿದವರು ಮತ್ತು ಒಬಿಸಿಯವರು. ಸಿದ್ದರಾಮಯ್ಯಗೆ ಕೇಳ್ತಿನಿ ಎಲ್ಲಿದೆ ಅಹಿಂದಾ? ಸರ್ಕಾರ ಡಿಕೆ ಬ್ರದರ್ಸ್ (ಅಲ್ಪಸಂಖ್ಯಾತ ರಿಗೆ) ರಕ್ಷಣೆ ಕೊಡ್ತಿದೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲಾ ಅಧಿಕಾರಿಗಳು ದುಡ್ಡು ಕೊಟ್ಟು ಜಿಲ್ಲೆಗೆ ವರ್ಗಾವಣೆ ಮಾಡಿಕೊಂಡು ಬಂದಿದ್ದಾರೆ ಎಂದು ಹರಿಹಾಯ್ದರು.
ಬರಗಾಲಕ್ಕೆ ನಯಾ ಪೈಸೆ ಕೊಟ್ಟಿಲ್ಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡ್ತಿದಾರೆ. ಮತ್ತೆ ರಾಜ್ಯ ಸರ್ಕಾರದ ಕೆಲಸದ ಏನು ಬರೀ ಪೋಸ್ಟಮನ್ ಕೆಲಸವಾ? ಬೆಳೆ ಪರಿಹಾರ ಎಷ್ಟು ಕೊಟ್ಟೊದಿರಿ ಎಂದು ಪ್ರಶ್ನಿಸಿದ ಅವರು, ಬದಲಾವಣೆ ಗಾಳಿ ಬೀಸುತ್ತಿದೆ. ನ್ಯಾಯಸಮ್ಮತವಾಗಿ ನಡೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾಜಿ ಸವಿವರಾದ ಬೈರತಿ ಬಸವರಾಜ, ಬಿ.ಸಿ. ಪಾಟೀಲ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ಭರತ ಬೊಮ್ಮಾಯಿ ಇತರರು ಇದ್ದರು.



