ಪಾಕಿಸ್ತಾನದಲ್ಲಿ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲೆ BLA ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನದ ಗ್ವಾದರ್​ ಬಳಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಚೀನಾದ ಇಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ .

ಘಟನೆಯಲ್ಲಿ ಒಂಬತ್ತು ಪಾಕ್ ಯೋಧರು ಮತ್ತು ನಾಲ್ವರು ಚೀನೀ ಇಂಜಿನಿಯರ್​​ಗಳು ಸಾವನ್ನಪ್ಪಿದ್ದಾರೆ. ದಾಳಿ ನಂತರ ಅದರ ಹೊಣೆಯನ್ನು ಬಿಎಲ್​ಎ ಹೊತ್ತುಕೊಂಡಿದೆ.

ಪಾಕಿಸ್ತಾನದ ಬೀಜಿಂಗ್-ಹಣಕಾಸಿನ ಗ್ವಾದರ್ ಬಂದರಿನಲ್ಲಿ ಕೆಲಸ ಮಾಡುವ ಚೀನಾದ ಎಂಜಿನಿಯರ್‌ಗಳ ಬೆಂಗಾವಲುಪಡೆಯ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ದಾಳಿ ನಡೆದ ಬಗ್ಗೆ ಪಾಕಿಸ್ತಾನ ಭದ್ರತಾ ಏಜೆನ್ಸಿಗಳು ದೃಢಪಡಿಸಿವೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!