ಹತ್ತಿರ ಹೋದರೆ ಜನ ಓಡ್ತಾರೆ.. ಉದ್ಯೋಗವೂ ಸಿಗ್ತಿಲ್ಲ: ಇದು ʼಬ್ಲಾಕ್‌ ಏಲಿಯನ್‌ʼ ಗೋಳಿನ ಕಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಈ ಪ್ರಪಂಚದಲ್ಲಿ ಕೆಲವರದ್ದು ವಿಚಿತ್ರ ಅಭಿಋಚಿ. ಫ್ರಾನ್ಸ್‌ ನ ಆಂಥೋನಿ ಲೋಫ್ರೆಡೊ ಎಂಬಾತ ಅಂತಹವರಲ್ಲಿ ಒಬ್ಬ ವಿಚಿತ್ರ ಆಸಾಮಿ. ತಾನು ಕಪ್ಪು ಏಲಿಯನ್‌ ನಂತೆ ಕಾಣಿಸಬೇಕು ಎಂಬುದು ಆತನ ಮನದ ಅಭಿಲಾಷೆ. ಅದಕ್ಕಾಗಿ ತನ್ನ ದೇಹದ ತುಂಬೆಲ್ಲಾ ಟ್ಯಾಟೂ ಹಾಕಿಸಿಕೊಂಡು ಸಂಪೂರ್ಣವಾಗಿ ಏಲಿಯನ್‌ನಂತೆ ಬದಲಾಗಿದ್ದಾನೆ. ಅದೇ ಈಗ ಈತನಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು, ಅನ್ಯಗ್ರಹ ಜೀವಿಯಂತೆ ಕಾಣುವ ಈತನಿಗೆ ಯಾರೂ ಸಹ ಕೆಲಸ ನೀಡುತ್ತಿಲ್ಲವಂತೆ.

34 ವರ್ಷದ ಆಂಥೋನಿ ಲೋಫ್ರೆಡೊ ತನ್ನನ್ನು ತಾನು ʼಕಪ್ಪು ಏಲಿಯನ್ʼ ಎಂದು ಕರೆದುಕೊಳ್ಳುತ್ತಾನೆ. ಮೈತುಂಬಾ ಕಪ್ಪು ಟ್ಯಾಟೂವನ್ನು ಹಾಕಿಕೊಂಡಿದ್ದಾನೆ. ಏಲಿಯನ್‌ ಪಂಜದಂತೆ ಕಾಣಲು ಎಡಗೈನ ಮೂರು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ.
ಮೂಗಿನ ಭಾಗಗಳು ಮತ್ತು ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ. ನಾಲಿಗೆಯನ್ನು ಸೀಳಿಕೊಂಡು, ಕಣ್ಣುಗುಡ್ಡೆಯೊಳಗೆ ಬಣ್ಣ ತುಂಸಿಕೊಂಡಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಅಂಥೋಣಿಗೆ ಇದೇ ರೂಪ ದೊಡ್ಡ ಮಟ್ಟದಲ್ಲಿ ಫಾಲೋವರ್ಸ್‌ ಗಳನ್ನು ತಂದುಕೊಟ್ಟಿದೆ. ಆತ ವಿಚಿತ್ರ ಹಾವಭಾವಗಳ ವಿಡಿಯೋಗಳನ್ನು ಮೆಚ್ಚುವ ಲಕ್ಷಾಂತರ ಜನರಿದ್ದಾರೆ. ಇನ್‌‌ಸ್ಟಾಗ್ರಾಂ ನಲ್ಲಿ ಆತನಿಗೆ ಬರೋಬ್ಬರಿ 1.2 ಮಿಲಿಯನ್ ಅನುಯಾಯಿಗಳಿದ್ದಾರೆ. ವಿಡಿಯೋ ನೋಡಿ.

ರೂಪ ಪರಿವರ್ತನೆಯಿಂದ ಆದ ಬದಲಾವಣೆಗೆ ಬಗ್ಗೆ ಅಥೋಣಿ ಮಾತನಾಡಿದ್ದು, ತನ್ನ ವಿಶಿಷ್ಟ ನೋಟಕ್ಕೆ ಧನಾತ್ಮಕತೆಗಿಂತ ನಕಾರಾತ್ಮಕ ಪ್ರತಿಕ್ರಿಯೆಗಳೇ ಜಾಸ್ತಿ ವ್ಯಕ್ತವಾಗಿದೆ. “ನನ್ನನ್ನು ನೋಡಿದರೆ ಕೂಗಾಡುವ ಮತ್ತು ಓಡಿಹೋಗುವ ಜನರಿದ್ದಾರೆ. ನಾನೂ ಒಬ್ಬ ಮನುಷ್ಯ.. ಆದರೆ ಹೆಚ್ಚಿನ ಜನರು ನನ್ನನ್ನು ಹುಚ್ಚನೆಂದು ಭಾವಿಸುತ್ತಾರೆ”. ಮತ್ತು ತನ್ನ ರೂಪ ನೋಡಿ ಯಾರೂ ಕೆಲಸ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!