Thursday, September 18, 2025

ಕಪ್ಪು ಬೆಳ್ಳುಳ್ಳಿಯಲ್ಲಿದೆ ವಿಟಮಿನ್‌ ಬಿ, ಇನ್ನೇನು ಲಾಭ ಇದೆ ನೋಡಿ..

ಕಪ್ಪು ಬೆಳ್ಳುಳ್ಳಿ ಬಗ್ಗೆ ಕೇಳಿದ್ದೀರಾ? ನೋಡೋಕೆ ಕಪ್ಪಿದೆ ಎಂದು ಹಾಳಾಗಿದೆ ಅಂದುಕೊಳ್ಳಬೇಡಿ. ಈ ಕಪ್ಪು ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ಲಾಭ ಇದೆ..

ಕಪ್ಪು ಬೆಳ್ಳುಳ್ಳಿಯ ಪ್ರಯೋಜನಗಳ ಕುರಿತು ಮಾಡಲಾದ ಅನೇಕ ಸಂಶೋಧನೆಗಳು ಪ್ರಕಾರ, ಇದರಲ್ಲಿ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂದು ತೋರಿಸಿವೆ. ಇದು ಅರ್ಜಿನೈನ್ ಮತ್ತು ಟ್ರಿಪ್ಟೊಫಾನ್ ಸೇರಿದಂತೆ 18 ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ.

ಜೊತೆಗೆ ಪ್ರೋಟೀನ್, ವಿಟಮಿನ್ ಬಿ, ಸಿ ಮತ್ತು ಕಾಲಜನ್ ಮತ್ತು ಇತರ ಹಲವು ರೀತಿಯ ಔಷಧೀಯ ಗುಣಗಳನ್ನು ಒಳಗೊಂಡಂತೆ ಅನೇಕ ಪೌಷ್ಟಿಕ ಅಂಶಗಳನ್ನು ಸಹ ಒಳಗೊಂಡಿದೆ.

ಕಪ್ಪು ಬೆಳ್ಳುಳ್ಳಿಯು ವಿವಿಧ ರೀತಿಯ ಸೋಂಕುಗಳು ಹಾಗೂ ಸ್ವಯಂ ನಿರೋಧಕ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಕಪ್ಪು ಬೆಳ್ಳುಳ್ಳಿಯ ಸೇವನೆಯು ಉತ್ತಮ ಸ್ಮರಣಶಕ್ತಿ ಹಾಗೂ ನರಮಂಡಲಕ್ಕೆ ಬಹಳ ಪ್ರಯೋಜನಕಾರಿ. ಇದು ಉರಿಯೂತದ ಹಾಗೂ ಇತರ ಹಲವು ರೀತಿಯ ಗುಣಗಳನ್ನು ಹೊಂದಿರುವುದರಿಂದ, ನರಮಂಡಲದಲ್ಲಿ ಉರಿಯೂತ ಹಾಗೂ ದೇಹದ ವಿಷವನ್ನು ತಡೆಗಟ್ಟುತ್ತದೆ.

ಸೇವನೆಯು ಆಲ್ಝೈಮರ್​ನ ಅಪಾಯವನ್ನು ಕಡಿಮೆ ಮಾಡುತ್ತದೆ. ಕಪ್ಪು ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಮಟ್ಟದ ಎಸ್ಎಲ್ ಸಿಸ್ಟೀನ್ ಇದ್ದು, ಅದು ಆಕ್ಸಿಡೇಟಿವ್ ಒತ್ತಡ ಹಾಗೂ ಉರಿಯೂತ ತಪ್ಪಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಇದಲ್ಲದೇ, ಕಪ್ಪು ಬೆಳ್ಳುಳ್ಳಿ ಕೊಲೊನ್ ಕ್ಯಾನ್ಸರ್, ಲ್ಯುಕೇಮಿಯಾ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ