August 31, 2026
Monday, August 31, 2026
spot_img

ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ: ಯುಗಾದಿಗೂ ಮುನ್ನವೇ ಮಂಡ್ಯಕ್ಕೆ ವರುಣನ ಎಂಟ್ರಿ!

ಹೊಸದಿಗಂತ ಮಂಡ್ಯ:

ಸಕ್ಕರೆ ನಗರಿ ಮಂಡ್ಯದಲ್ಲಿ ಬೇಸಿಗೆಯ ಬಿಸಿಲಿನ ಝಳಕ್ಕೆ ವರುಣ ದೇವ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯ ಆಗಮನದೊಂದಿಗೆ ಜಿಲ್ಲೆಯಾದ್ಯಂತ ಭೂಮಿ ತಂಪಾಗಿದ್ದು, ಹೈರಾಣಾಗಿದ್ದ ಜನತೆಗೆ ತುಸು ಸಮಾಧಾನ ತಂದಿದೆ.

ಸಾಮಾನ್ಯವಾಗಿ ಯುಗಾದಿ ಹಬ್ಬದ ಆಸುಪಾಸಿನಲ್ಲಿ ಮಳೆ ಬರುವುದು ರೂಢಿ. ಆದರೆ ಈ ಬಾರಿ ಯುಗಾದಿಗೆ ಇನ್ನೂ 20 ದಿನಗಳು ಬಾಕಿ ಇರುವಂತೆಯೇ, ಅಂದರೆ ಫೆಬ್ರವರಿ ಅಂತ್ಯದಲ್ಲೇ ಮಳೆರಾಯ ದರ್ಶನ ನೀಡಿರುವುದು ವಿಶೇಷ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕಾಣಿಸಿಕೊಳ್ಳಬೇಕಿದ್ದ ವರ್ಷಧಾರೆ ಈಗಲೇ ಸುರಿದಿರುವುದು ಮುಂಬರುವ ದಿನಗಳಿಗೆ ಒಂದು ‘ಶುಭ ಸೂಚನೆ’ ಎಂದೇ ಭಾವಿಸಲಾಗುತ್ತಿದೆ.

ಮಳೆಯ ಹನಿಗಳು ಕಾದಿದ್ದ ನೆಲಕ್ಕೆ ಬೀಳುತ್ತಿದ್ದಂತೆ ಹದವಾದ ಮಣ್ಣಿನ ಸುವಾಸನೆ ಆವರಿಸಿದ್ದು, ಮಂಡ್ಯದ ಜನತೆ ವರುಣನ ಈ ಅನಿರೀಕ್ಷಿತ ಅತಿಥಿ ಸತ್ಕಾರಕ್ಕೆ ಮನಸೋತಿದ್ದಾರೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಈ ಸಿಂಚನ ಹೊಸ ಚೈತನ್ಯ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !