Tuesday, August 16, 2022

Latest Posts

4000 ಅಡಿ ಎತ್ತರದಲ್ಲಿ ಪೈಲಟ್‌ ಇಲ್ಲದೆ ಹಾರಾಡಿದ ಮೊದಲ ಹೆಲಿಕಾಪ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತಿಹಾಸದಲ್ಲೇ ಮೊದಲ ಬಾರಿಗೆ ಪೈಲಟ್‌ ರಹಿತ ಹೆಲಿಕಾಪ್ಟರ್‌ ಹಾರಾಟ ನಡೆಸಿದೆ.
ಅಮೆರಿಕದ ಕೆಂಟುಕಿಯಲ್ಲಿನ ಸೇನಾ ಅಧಿಕಾರಿಗಳು ಈ ಮಾನವ ರಹಿತ ಹೆಲಿಕಾಪ್ಟರ್‌ ನ ಪರೀಕ್ಷೆ ನಡೆಸಿದರು. ಇದನ್ನು ಅಮೆರಿಕ ರಕ್ಷಣಾ ಸಂಶೋಧನಾ ಕಾರ್ಯಕ್ರಮ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇದುಎ ಬ್ಲ್ಯಾಕ್‌ ಹಾಕ್‌ ಹೆಲಿಕಾಪ್ಟರ್ ಆಗಿದ್ದು, ಸಂಪೂರ್ಣ ಕಂಪ್ಯೂಟರ್‌ ಚಾಲಿತ ಹೆಲಿಕಾಪ್ಟರ್‌ ಆಗಿದೆ. ಈ ಹೆಲಿಕಾಪ್ಟರ್‌ ಸುಮಾರು 30 ನಿಮಿಷಗಳ ಕಾಲ ಪೈಲಟ್‌ ಇಲ್ಲದೆ ಹಾರಾಟ ನಡೆಸಿದೆ.
ಸಿಮ್ಯುಲೇಟೆಡ್‌ ರೀತಿಯ ಸ್ಥಾಪಿಸಲಾದ ಕಾಲ್ಪನಿಕ ನಗರದ ಕಟ್ಟಡಗಳನ್ನು ದಾಟಿದೆ ಎಂದು ವರದಿ ತಿಳಿಸಿದೆ.  ಈ ಹೆಲಿಕಾಪ್ಟರ್‌ ಗಂಟೆಗೆ 250 ಕಿ.ಮೀ ವೇಗದಲ್ಲಿ 4000 ಅಡಿ ಎತ್ತರದಲ್ಲಿ ಹಾರಿದೆ.
ಪೈಲಟ್‌ ರಹಿತ ಹೆಲಿಕಾಪ್ಟರ್‌ ಬಳಕೆಯಿಂದ ಹೆಲಿಕಾಪ್ಟರ್‌ ಪತನದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಇದು ಕೇವಲ ಹಗಲು ಮಾತ್ರವಲ್ಲದೇ ರಾತ್ರಿ ವೇಳೆಯೂ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss