ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಮೇಲೆ ‘ಬ್ಲಾಕ್ ಮ್ಯಾಜಿಕ್’ ಮಾಡಿದ ಆರೋಪದ ಮೇಲೆ ಮಾಲ್ಡೀವ್ಸ್ ಪರಿಸರ ಸಚಿವೆ ಫಾತಿಮಾ ಶಮ್ನಾಜ್ ಅಲಿ ಸಲೀಮ್ ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಶಮ್ನಾಜ್ ಜೊತೆಗೆ, ಅಧ್ಯಕ್ಷರ ಕಚೇರಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಅವರ ಮಾಜಿ ಪತಿ ಆಡಮ್ ರಮೀಜ್ ಮತ್ತು ಇತರ ಇಬ್ಬರನ್ನು ಸಹ ಮುಯಿಝುಗೆ ಹತ್ತಿರವಾಗಲು ವಾಮಾಚಾರವನ್ನು ಬಳಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 23 ರಂದು ಘಟನೆ ಬೆಳಕಿಗೆ ಬಂದಿದ್ದು, ನಾಲ್ವರು ಆರೋಪಿಗಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಬುಧವಾರ, ಶಮ್ನಾಜ್ ಅವರನ್ನು ಪರಿಸರ ಸಚಿವಾಲಯದ ರಾಜ್ಯ ಸಚಿವರಾಗಿ ಅಮಾನತುಗೊಳಿಸಲಾಗಿದೆ.
ಮಾಲ್ಡೀವ್ಸ್ ಪರಿಸರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ರಾಜಕೀಯ ನೇಮಕಾತಿ ಎಂದು ಪಟ್ಟಿ ಮಾಡಲಾದ ಶಮ್ನಾಜ್ ಈಗ ಪಟ್ಟಿಯಲ್ಲಿಲ್ಲ. ಆಕೆಯ ಹೆಸರನ್ನು ಮಾಜಿ ರಾಜಕೀಯ ನೇಮಕಾತಿ ಪಟ್ಟಿಗೆ ಸ್ಥಳಾಂತರಿಸಲಾಗಿದೆ.