ಮಕ್ಕಳನ್ನು ಸ್ಕೂಲ್‌ಗೆ ಬಿಡೋಕೆ ಟು ವೀಲರ್‌ನಲ್ಲಿ ಹೋಗ್ತೀರಾ? ಹಾಗಿದ್ರೆ ಮಿಸ್‌ ಮಾಡದೇ ಇದನ್ನು ಓದಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡೋದಕ್ಕೆ ಪೋಷಕರು ಗಡಿಬಿಡಿಯಲ್ಲಿ ಟು ವೀಲರ್‌ನಲ್ಲಿ ಓಡಾಡೋದನ್ನು ನೋಡಿಯೇ ಇರುತ್ತೀರಿ. ಇನ್ಮುಂದೆ ಈ ರೀತಿ ಟು ವೀಲರ್‌ನಲ್ಲಿ ಓಡಾಡೋ ಮುನ್ನ ಈ ಸುದ್ದಿ ಓದಿ..

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೈಕ್​​ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಹೋಗುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಹಾಕದಿದ್ದರೆ ಕೇಸ್ ಹಾಕಲಾಗುತ್ತದೆ ಮತ್ತು ಐನೂರರಿಂದ ಒಂದು ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಸೇಫ್ಟಿ ಬೆಲ್ಟ್‌ ಕಡ್ಡಾಯ. ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಹಾರ್ನಸ್ ಧಾರಣೆ ಮಾಡುವುದು ಕಡ್ಡಾಯ. ಜುಲೈ ಮೊದಲ ವಾರದಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ. ಎರಡನೆಯ ವಾರದಿಂದ ವಾಹನ ತಪಾಸಣೆ ಮಾಡಿ ದಂಡ ಹಾಕಲು ಶುರು ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ನೋಡಿ ಇನ್ನೇನೆಲ್ಲ ಬೇಕೋ ಫೈನ್ ಹಾಕಲು ಹುಡುಕಿ ನಿಮ್ಮ ಸರಕಾರ ಫೈನ್ನಿಂದನೆ ನಡೆಯುತ್ತಿದೆ, ನಾವ್ಯಾಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು ನೀವೇ ಮಕ್ಕಳನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ, ರಾಜಕೀಯದವರೇ ನಿಮ್ಮ ಮಕ್ಕಳು ಹೇಗೆ ಹೋಗುತ್ತಿದ್ದಾರೆ ನಡೆದುಕೊಂಡೋ ಬೇಡದ ನಿಯಮ ರಸ್ತೆ ರಿಪೇರಿ ಮಾಡಿಸಿ ಇರುವ ರಸ್ತೆ 3 ಮೀಟರ್ ಅದರಲ್ಲಿ ಹೋಗುವ ವಾಹನ 100 ಮೀಟರ್ ಗು ಮೀರಿ

LEAVE A REPLY

Please enter your comment!
Please enter your name here

error: Content is protected !!