ಡೀಪ್​ಫೇಕ್​ಗಳಿಗೆ ತಂತ್ರಜ್ಞಾನವನ್ನು ದೂಷಿಸುವುದು ತಪ್ಪು: ನಟಿ ಕೃತಿ ಸನೋನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕೃತಿ ಸನೋನ್ ಡೀಪ್ ಫೇಕ್ ಬಗ್ಗೆ ಮಾತನಾಡಿದ್ದಾರೆ.

‘ಸೆಲೆಬ್ರಿಟಿಗಳ ಮಾರ್ಫಿಂಗ್ ವಿಡಿಯೋಗಳು ಕೆಲವು ತಿಂಗಳುಗಳಿಂದ ಸಂಚಲನ ಮೂಡಿಸುತ್ತಿವೆ. ಕೃತಕ ಬುದ್ಧಿಮತ್ತೆ ಬಳಸಿ ಮಾಡಿದ ವೀಡಿಯೋಗಳಿಂದ ಹಲವರು ಇನ್ನಿಲ್ಲದ ಮುಜುಗರ ಮತ್ತು ಮನೋವೇದನೆ ಅನುಭವಿಸಿದ್ದನ್ನು ನೋಡಿದ್ದೇವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನಟಿ ಕೃತಿ ಸನನ್ ಇದು ತುಂಬಾ ಆತಂಕಕಾರಿಯಾಗಿದೆ. ಡೀಪ್​ಫೇಕ್​ಗಳಿಗೆ ತಂತ್ರಜ್ಞಾನವನ್ನು ದೂಷಿಸುವುದು ತಪ್ಪು, ಅದರಿಂದ ಅನೇಕ ಪ್ರಯೋಜನಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಐ ಸಹ ಮಾನವರಿಂದ ರಚಿಸಲ್ಪಟ್ಟಿದೆ ಎಂದು ನೆನಪಿನಲ್ಲಿಡಬೇಕು. ತಂತ್ರಜ್ಞಾನದ ಬೆಳವಣಿಗೆಯನ್ನು ನೋಡಿದರೆ ಭವಿಷ್ಯದಲ್ಲಿ ಎಐ ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಕೃತಿ ಸನನ್ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!