ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಡಿಯಂ ಮೆಟಲ್ ಬಳಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು ಆಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ 4ನೇ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕೃಷಿಹೊಂಡದಲ್ಲಿ ಸೋಡಿಯಂ ಬಳಸಿ ಡ್ರೋನ್ ಪ್ರತಾಪ್ ಸ್ಪೋಟದ ಪ್ರಯೋಗ ಮಾಡಿದ್ದರು. ಸ್ಫೋಟದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪ್ ಅಪ್ಲೋಡ್ ಮಾಡಿದ್ದರು.
ಸ್ಪೋಟದ ವಿಡಿಯೋವನ್ನು ಆಧರಿಸಿ ಮಿಡಿಗೇಶಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಬಳಿಕ ಡ್ರೋನ್ ಪ್ರತಾಪ್ ಅವರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಕೋರ್ಟ್ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಹಾಗಾಗಿ ಇದೀಗ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ನಾಳೆ ಜೈಲಿನಿಂದ ಡ್ರೋನ್ ಪ್ರತಾಪ್ ಬಿಡುಗಡೆ ಆಗಲಿದ್ದಾರೆ.