`ಬ್ಲೀಚ್’, ಬೀ ಕೇರ್‌‌ ಫುಲ್: ಆದಷ್ಟು ದೂರ ಇದ್ದರೆ ಒಳ್ಳೆಯದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌಂದರ್ಯವನ್ನು ಇಮ್ಮಡಿಗೊಳಿಸುವ, ಸುಂದರವಾಗಿ ಕಾಣುವ ಹಂಬಲ ಯಾರಿಗಿಲ್ಲ ಹೇಳಿ. ಪಟ್ಟಣದಲ್ಲಿರುವವರಂತೂ ಟ್ರೆಂಡೀಯಾಗಿ ಇರಲು ಬಯಸುತ್ತಾರೆ. ಪಾರ್ಲರ್‍ಗಳಿಗೆ ಹೋಗುವುದು, ಮಾಡರ್ನ್ ಆಗಿ ಕಾಣುವಂತೆ ಮಾಡುವುದು, ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಳ್ಳುವುದು ಹೀಗೆ ಹಲವಾರು ಕಸರತ್ತು ಮಾಡಿಕೊಳ್ಳುತ್ತಾರೆ.

ಇದೀಗ `ಬ್ಲೀಚ್’ ಟ್ರೆಂಡಿಯಾಗಿದೆ. ತ್ವಚೆಯ ಸೌಂದರ್ಯ ಹೆಚ್ಚಿಸಲು ಹಲವು ಮಂದಿ `ಬ್ಲೀಚ್’ ಮೊರೆಹೋಗುತ್ತಿದ್ದಾರೆ. ಇದು ಕಪ್ಪು ಕಲೆಗಳನ್ನು ಮೆರೆಮಾಚಲು, ಹೊಳಪು ನೀಡಲು, ಸ್ವಚ್ಛಗೊಳಿಸಲು ಹಾಗೂ ಇನ್ನೂ ಅನೇಕ ವಿಚಾರಗಳಿಗಾಗಿ ಬ್ಲೀಚ್ ಸಹಕಾರಿಯಾಗಿದೆ. ಬ್ಲೀಚ್ ಅತಿಯಾದರೆ ಅದು ಹಾನಿಯೂ ಹೌದು.

ಅತಿಯಾದ ಬ್ಲೀಚ್ ಬಳಕೆಯಿಂದ ಊತದಂತಹ ತೊಂದರೆ ಉಂಟಾಗುತ್ತದೆ. ಕೆಲವೊಬ್ಬರಲ್ಲಿ ಚರ್ಮದ ಮೇಲೆ ಕಪ್ಪು ಕಲೆಗಳ ಸಂಖ್ಯೆ ಹೆಚ್ಚಾಗುವುದಲ್ಲದೆ, ಮೊಡವೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ತುರಿಕೆಯಂತಹ ತೊಂದರೆಗಳು ಕಾಣಬಹುದಾಗಿದೆ. ಮುಖಕ್ಕೆ ಬ್ಲೀಚ್ ಬಳಸುವ ಸಂದರ್ಭ ಬಾಯಿಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಧೈರಾಯ್ಡ್, ಲಿವರ್, ಅನೀಮಿಯಾ ಮೊದಲಾದ ತೊಂದರೆಗಳಿಗೆ ಕಾರಣವಾಗುತ್ತದೆ. ಅತಿಯಾದ ಬ್ಲೀಚ್‍ನಿಂದ ಚರ್ಮದ ಕಾಯಿಲೆ, ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!