ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪೊಲೀಸರ ಮುಕ್ತ ಕೆಲಸಕ್ಕೆ ತಡೆ: ಅಣ್ಣಾಮಲೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಕಾಂಗ್ರೆಸ್ ತುಷ್ಟಿಕರಣ ಮಾಡ್ತಾ ಇದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆಗಿಳಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಪೊಲೀಸ್ ಗೆ ಕೆಲಸ ಮಾಡೋಕೆ ಬಿಡಲ್ಲ. ನಾನು ರಾಜಕಾರಣಿ ಆಗಿ ಈಗ ನನ್ನ ಪೊಲೀಸ್ ಅವಧಿ ಬಗ್ಗೆ ಮಾತಾಡೋಕೆ ಹೋಗಲ್ಲ. ತಪ್ಪಾಗುತ್ತದೆ. ಆದರೆ ಕಾಂಗ್ರೆಸ್ ತುಷ್ಟಿಕರಣ ಮಾಡ್ತಾ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಹುಬ್ಬಳ್ಳಿಯ ಕಾಲೇಜು ಯುವತಿ ನೇಹಾ ಕೊಲೆ ಆಗಿದೆ. ಇದು ಆಗಬಾರದಿತ್ತು. ಸರ್ಕಾರ ಏನು ಕ್ರಮ ಕೈಗೊಂಡಿದೆ? ಈ ಬಗ್ಗೆ ಸ್ವತಃ ನೇಹಾ ತಂದೆ ನಿರಂಜನ್ ಹಿರೇಮಠ್ ಅವರೇ ಹೇಳಿದ್ದಾರೆ ಏನೆಲ್ಲಾ ಆಗಿದೆ ಎಂದು. ಕಾಂಗ್ರೆಸ್‌ ಸರ್ಕಾರದವರು ವಿಕ್ಟಿಮ್ ಪರ ಇದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದರು.

ಜನತೆಗೆ ತಲಾ 10 ಕೆ.ಜಿ. ಅಕ್ಕಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.ಈವರೆಗೆ ಒಂದು ಕಾಳು ಅಕ್ಕಿ ಕೊಟ್ರಾ? ಕಾಂಗ್ರೆಸ್ ಒಂದೊಂದು ಚುನಾವಣೆ ಒಂದೊಂದು ಡ್ರಾಮಾ ಮಾಡತ್ತದೆ. ಈಗ ಚೊಂಬಿನ ಡ್ರಾಮಾ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕರು ಕರ್ನಾಟಕ ಜನರಿಗೆ ಚೊಂಬು ಕೊಟ್ಟು ಡ್ರಾಮಾ ಮಾಡುತ್ತಿದ್ದಾರೆ.

ನಂಗೆ ಕರ್ನಾಟಕ‌ ಹೊಸತಲ್ಲ. ನಾನು ಈ ಹಿಂದೆ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೂ ಬಂದಿದ್ದೆ. ಈಗಲೂ ಬಂದಿದ್ದೇನೆ. 2014 ಹಾಗೂ 2019ರ ಚುನಾವಣೆಯಿಂದ ಈಬಾರಿಯ ಲೋಕಸಭಾ ಚುನಾವಣೆವರೆಗೂ ಮೋದಿ ಅವರ ಅಲೆಯಿದೆ. ಬಿಜೆಪಿ ರಾಜ್ಯದ ಎಲ್ಲ ಸೀಟು ಗೆಲ್ಲಲಿದೆಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!