ಮಕ್ಕಳಲ್ಲಿ ಬ್ಲ್ಯೂ ಫೀವರ್: ಪೋಷಕರೇ ಈ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. ಬೆಂಗಳೂರಿನ ಸುತ್ತಮುತ್ತ ದಿನಕ್ಕೊಂದು ಹವಾಮಾನವಿದ್ದು, ಮನೆಯಿಂದ ಮಕ್ಕಳು ಹೊರಬರಲಾದಷ್ಟು ಚಳಿ ಇದೆ. ಇದರ ನಡುವೆ ಬ್ಲ್ಯೂ ಫೀವರ್ ಭೀತಿ ಎದುರಾಗಿದ್ದು, ಯಾವುದೇ ರೀತಿ ಜ್ವರ ಬಂದರೂ ಪೋಷಕರು ನಿರ್ಲಕ್ಷ್ಯ ಮಾಡುವಂತಿಲ್ಲ.

ಬ್ಲ್ಯೂ ಫೀವರ್‌ನ್ನು ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದೂ ಕರೆಯಲಾಗುತ್ತದೆ. ಅಮೆರಿಕ, ಕೆನಡಾದಲ್ಲಿ ಹೆಚ್ಚು ಈ ಫೀವರ್ ಪತ್ತೆಯಾಗಿದೆ. ಪ್ರಾಣಿಗಳ ಉಣ್ಣೆಯಿಂದ ಫೀವರ್ ಹರಡುತ್ತದೆ.

ವಾತಾವರಣದಲ್ಲಿ ಬದಲಾವಣೆ ಆಗಿರುವ ಕಾರಣ ಮಕ್ಕಳಲ್ಲಿ ಶೀತ, ಜ್ವರ, ಥಂಡಿ ಸಾಮಾನ್ಯ. ಮನೆ ಮದ್ದುಗಳನ್ನು ನೀಡಿ ಸುಮ್ಮನಿರುವ ಪೋಷಕರು ಇದು ಬ್ಲ್ಯೂ ಫೀವರ್ ಇರಬಹುದಾ ಎಂದು ಯೋಚಿಸಬೇಕಿದ್ದು, ಯಾವುದೇ ಜ್ವರ ಕಾಣಿಸಿದರೂ ವೈದ್ಯರನ್ನು ಭೇಟಿ ಮಾಡಬೇಕಿದೆ.

ಲಕ್ಷಣಗಳು
ತಲೆನೋವು
ಜ್ವರ
ಸುಸ್ತು
ಶೀತ
ಕೆಂಪಾದ ಕಣ್ಣು
ಮೈ ಕೈ ನೋವು
ಮಂಡಿ ನೋವು
ವಾಂತಿ
ಮರೆವು
ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುವುದು
ಉಸಿರಾಟದ ಸಮಸ್ಯೆ

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!