RECRUITMENT | ಬಿಎಂಆರ್‌ಸಿಎಲ್‌ ನಲ್ಲಿ ಖಾಲಿಯಿದೆ 236 ಹುದ್ದೆಗಳು, ತಿಂಗಳಿಗೆ 94 ಸಾವಿರ ವೇತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ 236 ಸ್ಟೇಷನ್‌ ಕಂಟ್ರೋಲರ್‌, ಟ್ರೈನ್‌ ಆಪರೇಟರ್‌, ಸೆಕ್ಷನ್‌ ಇಂಜಿನಿಯರ್‌ ಮತ್ತು ಮೆಂಟೈನರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಡಿಪ್ಲೋಮಾ,‌ ಐಟಿಐ, ಬಿ.ಇ/ಬಿ.ಟೆಕ್‌ ವಿದ್ಯಾರ್ಹತೆ ಜೊತೆಗೆ ಮಾರ್ಚ್‌ 22,2023ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 25,000/- ರಿಂದ 94,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಏಪ್ರಿಲ್‌ 24,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!