ಕನ್ನಡಿಗರ ಆಕ್ರೋಶಕ್ಕೆ ಬೆದರಿದ BMRCL! ನೇಮಕಾತಿ ಅಧಿಸೂಚನೆ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊನ್ನೆ ತಾನೇ ಬಿಎಂಆರ್‌ಸಿಎಲ್ 50 ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು. ಆದರೆ ಕನ್ನಡಿಗರನ್ನು ಬಿಟ್ಟು ಇತರೆ ಭಾಷಿಗರಿಗೆ ಉದ್ಯೋಗ ಅವಕಾಶ ನೀಡಲು ಮುಂದಾದ ಬಿಎಂಆರ್​ಸಿಎಲ್​ ಕ್ರಮವನ್ನು ಕನ್ನಡಗರು ವಿರೋಧಿಸಿದ್ದರು.

ಈ ವಿರೋಧದಿಂದ ಎಚ್ಚೆತ್ತ ಅಧಿಕಾರಿಗಳು ನೇಮಕಾತಿ ಅಧಿಸೂಚನೆ ಹಿಂಪಡೆದಿದ್ದಾರೆ. ಬಿಎಂಆರ್​​ಸಿಎಲ್ ನೇಮಕಾತಿ ಅಧಿಸೂಚನೆಯಲ್ಲಿದ್ದ ನಿಯಮಗಳು ಕನ್ನಡಿಗರು ಅರ್ಜಿ ಹಾಕಲು ಸಾಧ್ಯವಾಗದ ರೀತಿಯಲ್ಲಿ ಇದ್ದವು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಮಾರ್ಚ್ 12 ರಂದು ಬಿಎಂಆರ್‌ಸಿಎಲ್ ಹೊರಡಿಸಿದ ಅಧಿಸೂಚನೆ ಬಗ್ಗೆ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಬಿಎಂಆರ್​ಸಿಎಲ್​ ಅಧಿಸೂಚನೆ ವಾಪಸ್ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!